ಬೆಂಗಳೂರು: ಪ್ರವೀಣ್ ನೆಟ್ಟರ್ ಹತ್ಯೆ ಘಟನೆ ಹಿನ್ನೆಯಲ್ಲಿ ರದ್ದಾಗಿದ್ದ ಸರ್ಕಾರದ ‘ಜನೋತ್ಸವ’ ಕಾರ್ಯಕ್ರಮವನ್ನು ಈ ತಿಂಗಳಾಂತ್ಯದಲ್ಲಿ ನಡೆಸಲು ಬಿಜೆಪಿ ತೀರ್ಮಾನಿದೆ. ಆಗಸ್ಟ್ 28ಕ್ಕೆ ದೊಡ್ಡಬಳ್ಳಾಪುರ ದಲ್ಲಿ ಸರ್ಕಾರದ ಸಾಧನೆಯ ಜನೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸಲು ರಾಜ್ಯದ ಐದು ಕಡೆಗಳಲ್ಲಿ ಜನೋತ್ಸವ ನಡೆಸಲಾಗುವುದೆಂದು ತಿಳಿಸಿದರು
ಜುಲೈ 28ಕ್ಕೆ ಆಗಬೇಕಿದ್ದ ಜನೋತ್ಸವವನ್ನು ಅನಿವಾರ್ಯ ಕಾರಣಗಳಿಂದ ರದ್ದು ಮಾಡಲಾಗಿತ್ತು. 10 – 15 ದಿನಗಳಿಂದ ಈ ಭಾಗದ ಜನರ ಒತ್ತಾಯ ಹೆಚ್ಚಾಗಿದೆ. ಬೇರೆ ಕಡೆ ಸಮಾವೇಶ ಮಾಡಲು ಜನ ಒಪ್ಪಲಿಲ್ಲ. ನಾವು ಸಾಕಷ್ಟು ತಯಾರಿ ನಡೆಸಿದ್ದು ದೊಡ್ಡಬಳ್ಳಾಪುರ ದಿಂದಲೇ ಜನೋತ್ಸವ ಪ್ರಾರಂಭವಾಗಬೇಕು. ಮೊದಲ ಹೆಜ್ಜೆ ಇಟ್ಟಿದ್ದೇವೆ. ಇಲ್ಲಿಂದಲೇ ಜನೋತ್ಸವ ಆರಂಭ ಆಗಲಿ ಆಗಲಿ ಎಂದು ನಮಗಿಂತಲೂ ಹೆಚ್ಚಿನ ಧೃಢ ನಿರ್ಧಾರ ಅವರದಾಗಿದೆ. ಅವರ ಉತ್ಸಾಹ ನಿರ್ಣಯಕ್ಕೆ ತಲೆಬಾಗಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದರು.



















































