ಮಂಗಳೂರು: ಕರಾವಳಿ ಮೂಲದ ‘ವೇದಾಂತ ಶಿಕ್ಷಣ ಸಂಸ್ಥೆ’ ಹೊಸ ಮೈಲುಗಲ್ಲು ಸಾಧಿಸಿದೆ. ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣಕ್ಕೆ ಬುನಾದಿಯಾಗುತ್ತಿರುವ ‘ವೇದಾಂತ’, NEET, JEEE, CET ತರಬೇತಿ ಮೂಲಕ ರಾಜ್ಯದಲ್ಲಿ ತನ್ನದೇ ಆದ ಜನಪ್ರಿಯತೆಯನ್ನು ಹೊಂದಿದೆ. ಇದೀಗ ಪದವಿಪೂರ್ವ ಶಿಕ್ಷಣವನ್ನೂ ಆರಂಭಿಸಿ, ನೂರಾರು ವಿದ್ಯಾರ್ಥಿಗಳಿಗೆ ಆಧಾರವಾಗಿ ನಿಂತಿದೆ.
ಮಂಗಳೂರಿನ ನೀರುಮಾರ್ಗ ಬಳಿಯ, ಫೆರ್ಮಾಯಿ ಚರ್ಚ್ ಸಮೀಪದ ‘ವೇದಾಂತ ಪದವಿ ಪೂರ್ವ ಕಾಲೇಜು’ ತನ್ನಲ್ಲಿರುವ ವಿದ್ಯಾರ್ಥಿಗಳಿಗೆ ಪಠ್ಯ ವಿಷಯಗಳ ಬೋಧನೆಯ ಜೊತೆಯಲ್ಲೇ CET, NEET, JEE ಕುರಿತು ತರಬೇತಿ ನೀಡುತ್ತಿದೆ. ಪದವಿ ಪೂರ್ವ ಶಿಕ್ಷಣದ ಸಂದರ್ಭದಲ್ಲೇ ವಿದ್ಯಾರ್ಥಿಗಳ ಆಸಕ್ತಿಗೆ ತಕ್ಕಂತೆಯೇ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಯಶಸ್ವೀ ಸೂತ್ರವನ್ನು ‘ವೇದಾಂತ’ ಹೇಳಿಕೊಡುತ್ತಿದೆ.
ಕಳೆದ 10 ವರ್ಷಗಳಿಂದ ವಿವಿಧ್ಯ ಎಂಬ ಹೆಸರಲ್ಲಿ CET, NEET, JEE ಪರೀಕ್ಷೆಗಳ ಬಗ್ಗೆ ಕೋಚಿಂಗ್ ನೀಡಲಾಗುತ್ತಿದೆ. ಈ ವಿಶೇಷ ಕೋಚಿಂಗ್ ಮೂಲಕ ಕರಾವಳಿಯ ಹಲವಾರು ವಿದ್ಯಾರ್ಥಿಗಳು ಉತ್ತಮ ಸ್ಥಾನ ಗಳಿಸಿ ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣಕ್ಕೆ ಸೇರ್ಪಡೆಯಾಗಿದ್ದಾರೆ. ಇದೀಗ ಈ ಸಂಸ್ಥೆಯೇ ‘ವೇದಾಂತ ಪದವಿಪೂರ್ವ ಕಾಲೇಜ್’ನ್ನು ಸ್ಥಾಪಿಸಿ, ಪಿಯುಸಿ ಶಿಕ್ಷಣದ ಜೊತೆಯಲ್ಲೇ CET, NEET, JEE ಕೋಚಿಂಗ್ ನೀಡುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ಎಂದು ವೇದಾಂತ್ ಕಾಲೇಜಿನ ನಿರ್ದೇಶಕ ರಾಮನಾಥ್ ತಿಳಿಸಿದ್ದಾರೆ.

ಪ್ರತಿಭಾವಂತರಿಗೆ ಆದ್ಯತೆ:
ವೇದಾಂತ್ ಮೂಲಕ CET, NEET, JEE ಕೋಚಿಂಗ್ ಸಿಗುತ್ತಿರುವುದರಿಂದಾಗಿ ಪಿಯುಸಿ ಪ್ರವೇಶಕ್ಕೆ ಬೇಡಿಕೆ ಹೆಚ್ಚಾಗಿದೆ. ಆದರೂ ಕೂಡಾ ರಾಜ್ಯದ ವಿವಿಧೆಡೆಯ ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲಾಗುತ್ತಿದೆ. ಐಐಟಿ ಪರಿಣಿತರಿಂದ CET, NEET, JEE ಕೋಚಿಂಗ್ ನೀಡಲಾಗುತ್ತಿದೆ. ಬೇರೆ ಕಡೆ ಈ ಕೋಚಿಂಗಿಗಾಗಿ ಲಕ್ಷಾಂತರ ರೂಪಾಯಿ ಶುಲ್ಕ ಪಡೆಯಲಾಗುತ್ತಿದೆ. ಆದರೆ ‘ವೇದಾಂತ’ದಲ್ಲಿ ಇದಕ್ಕಾಗಿ ಯಾವುದೇ ಹೆಚ್ಚಿನ ಶುಲ್ಕ ಪಡೆಯಲಾಗುತ್ತಿಲ್ಲ. ಹಾಗಾಗಿ ಸುಸಜ್ಜಿತ ತರಬೇತಿ ವ್ಯವಸ್ಥೆ ಇರುವ ‘ವೇದಾಂತ ಪಿಯು ಕಾಲೇಜ್’ ಪ್ರವೇಶಕ್ಕೆ ಹೆಚ್ಚಿನ ಬೇಡಿಕೆ ಇದೆ ಎನ್ನುತ್ತಾರೆ ನಿರ್ದೇಶಕ ರಾಮನಾಥ್.
ಮುಂಬರುವ ಪರೀಕ್ಷಾ ವೇಳಾಪಟ್ಟಿ ಮತ್ತು ಪರೀಕ್ಷಾ ಕೇಂದ್ರ:
ಮಂಗಳೂರಿನಲ್ಲಿ IITIANS ಮತ್ತು Doctors ನಡೆಸುತ್ತಿರುವ ‘ವೇದಾಂತ ಪದವಿಪೂರ್ವ ಕಾಲೇಜ್’ ಉಚಿತ ವಿದ್ಯಾರ್ಥಿವೇತನ ಮೂಲಕ ಪ್ರವೇಶಕ್ಕಾಗಿ State/CBSE/ICSE 10ನೆೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು. ಚಿಕ್ಕೋಡಿ, ಮಂಗಳೂರು, ಬಳ್ಳಾರಿ, ಹೊಸಪೇಟೆ, ಕೋಲಾರ ನಗರಗಳ ವಿವಿಧ ಕಾಲೇಜುಗಳಲ್ಲಿ ಬೆಳಿಗ್ಗೆ 10ಗಂಟೆಯಿಂದ 11 ಗಂಟೆವರೆಗೆ ಈ ಪ್ರವೇಶ ಪರೀಕ್ಷೆ ನಡೆಯಲಿದೆ.
- 21.09.2025 (Sunday): Chikkody (Belgaum) GSES English medium school Chikodi, SBI colony RLS Nagar Chikodi 591201
- 05.10.2025 (Sunday): Mangalore Vedanta P U College, Cutinhopadavu, Fermai, Mangalore – 575029
- 12.10.2025 (Sunday): Bellary Ex municipal high school Sangam circle, Dr. Rajkumar road, Bellary-583101
- 12.10.2025 (Sunday): Hospet KSPL P U college Basaveshwara badavane, Behind Hero Honda showroom Hospet 583201
- 19.10.2025 (Sunday): Kolar Sri Channegowda Group of institutions, NH75 bypass, Near Railway gate, Kogilahalli, Kolar– 563101




















































