ಯುವಕ ಯುವತಿಯರ ನಡುವೆ ಪ್ರೇಮಾಂಕುರ ಸಹಜ. ಸಲಿಂಗ ಪ್ರೀತಿಯ ಬಗ್ಗೆಯೂ ಕೇಳಿದ್ದುಂಟು. ಆದರೆ ಚಿಂಪಾಂಜಿಗೂ ಮಹಿಳೆಗೂ ಅಫೇರ್ಸ್ ಇದೆ ಎಂದರೆ ನಂಬುತ್ತೀರ?
ಇಲ್ಲಿದೆ ನೋಡಿ ಅಚ್ಚರಿಯ ಪ್ರಸಂಗ. ಪ್ರಾಣಿ ಸಂಗ್ರಹಾಲಯಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಮಹಿಳೆ ಮೇಲೆ ಅದೇ ZOOನಲ್ಲಿರುವ ಚಿಂಪಾಂಜಿಗೆ ಲವ್. ಈ ಚೆಲುವೆಯನ್ನು ಬಿಟ್ಟಿರಲಾಗದ ಮನಸ್ಥಿತಿ ಚಿಂಪಾಂಜಿಯದ್ದು. ಈ ಪ್ರೇಮ ಪ್ರಸಂಗ ಇದೀಗ ಆ ಮೃಗಾಲಯದ ಸಿಬ್ಬಂದಿಯನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.
ಬೆಲ್ಜಿಯಂನ ಆ್ಯಂಟ್ವರ್ಪ್ ಮೃಗಾಲಯಕ್ಕೆ ಮಹಿಳೆಯೊಬ್ಬರು ಆಗಾಗ್ಗೆ ಭೇಟಿ ನೀಡುತ್ತಿದ್ದರು. ಕಳೆದ ಹಲವಾರು ವರ್ಷಗಳಿಂದ ಪ್ರತೀ ವಾರ ಭೇಟಿ ನೀಡಿದಾಗ ಈ ಮಹಿಳೆ ‘ಚಿಟಾ’ ಹೆಸರಿನ ಚಿಂಪಾಂಜಿ ಜೊತೆ ಕಾಲ ಕಳೆಯುತ್ತಿದ್ದಳು. ತನ್ನದೇ ದಾಟಿಯಲ್ಲಿ ಮಾತನಾಡುತ್ತಾ, ಸನ್ನೆಗಳನ್ನು ಮಾಡುತ್ತಾ ಚಿಂಪಾಂಜಿಯನ್ನು ಖುಷಿಪಡಿಸುತ್ತಿದ್ದಳು. ಈ ಚಿಂಪಾಂಜಿ ಗ್ಲಾಸ್‌ನೊಳಗೆ ಇರುತ್ತಿತ್ತಾದರೂ, ಈ ಚೆಲುವೆ ಬಂದರೆ ಸಾಕು ಖುಷಿಯ ಕಡಲಲ್ಲಿ ತೇಲುತ್ತಿರುತ್ತದೆ. ಇವರಿಬ್ಬರು ಪರಸ್ಪರ ಮುದ್ದಾಡುತ್ತಾ ವಾತ್ಸಲ್ಯದ ಕ್ಷಣಗಳನ್ನೂ ಕಳೆಯುತ್ತಿದ್ದರು.
ಆದರೆ ಇದೇ ಪ್ರೀತಿ ಇದೀಗ ಮುಳುವಾಗಿದೆಯಂತೆ.
ಈ ಚೆಲುವೆಯ ಆಗಮನವನ್ನೇ ಎದುರು ನೋಡುವ ಈ ಚಿಂಪಾಂಜಿ ಬೇರೆ ಪ್ರಾಣಿಗಳ ಜೊತೆ ಬೆರೆಯುತ್ತಿಲ್ಲವಂತೆ. ಈ ಮಹಿಳೆ ಬಂದರೆ ಬೇರೆ ತನ್ನ ಸಹವರ್ತಿಗಳ ಕಡೆ ಗಮನವನ್ನೇ ಕೊಡುವುದಿಲ್ಲವಂತೆ. ಒಂದು ವೇಳೆ ಮಹಿಳೆ ಬಾರದೇ ಇದ್ದರೆ ವಿರಹ ವೇದನೆಯಿಂದ ಈ ಚಿಂಪಾಂಜಿ ಒದ್ದಾಡುತ್ತದೆಯಂತೆ.
ಈ ಪರಿಸ್ಥಿತಿಯಿಂದಾಗಿ ಮೃಗಾಲಯದ ಸಿಬ್ಬಂದಿ ಚಿಂತೆಗೀಡಾಗಿದ್ದಾರೆ.
ಈ ಚಿಂಪಾಂಜಿಯನ್ನು ಸಹಜ ಸ್ಥಿತಿಗೆ ತರಬೇಕಾದರೆ ಮಹಿಳೆಯಿಂದ ಶಾಶ್ವತವಾಗಿ ದೂರ ಮಾಡುವ ಅನಿವಾರ್ಯತೆ ಇದೆ ಎಂಬ ಸಲಹೆ ತಜ್ಞರದ್ದು. ಹಾಗಾಗಿ ಮಹಿಳೆ ಪಾಲಿಗೆ ಮೃಗಾಲಯದ ಬಾಗಿಲು ಮುಚ್ಚಲಾಗಿದೆ. ಮೃಗಾಲಯ ಪ್ರವೇಶಿಸದಂತೆ ಆ ಮಹಿಳೆಗೆ ಆಡಳಿತ ಮಂಡಳಿ ನಿರ್ಬಂಧಿಸಿದೆ.
ಈ ಪ್ರೇಮ ಪುರಾಣ ಇಷ್ಟಕ್ಕೇ ನಿಂತಿಲ್ಲ. ಮೃಗಾಲಯದ ಅಧಿಕಾರಿಗಳ ಕ್ರಮದಿಂದ ಕುಪಿತಳಾಗಿರುವ ಈ ಮಹಿಳೆ, ತಮ್ಮಿಬ್ವರನ್ನು ಬೇರೆ ಬೇರೆ ಮಾಡುವ ಕ್ರಮದ ವಿರುದ್ದ ಕೋರ್ಟ್ ಮೊರೆ ಹೋಗಲು ಸಜ್ಜಾಗಿದ್ದಾರಂತೆ.