ಬೆಂಗಳೂರು : ಜಿಲ್ಲಾಧಿಕಾರಿ ಜೆ ಮಂಜುನಾಥ ರವರ ಆದೇಶದಂತೆ ಜಿಲ್ಲೆಯ ವಿವಿದಕಡೆ ಕಾರ್ಯಾಚರಣೆ ನಡೆಸಿದ ಜಿಲ್ಲಾಡಳಿತ 67.74ಕೋಟಿ ಮೌಲ್ಯದ 171ಎಕರೆ ಗುಂಟೆ ಸರಕಾರಿ ಭೂಮಿ ವಶಕ್ಕೆ ಪಡೆದಿದೆ.
ದಕ್ಷಿಣದಲ್ಲಿ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಡಾ ಎಂ ಜಿ ಶಿವಣ್ಣ ನೇತೃತ್ವದಲ್ಲಿ ಸ್ಥಳಕ್ಕೆ ಜೆಸಿಬಿಗಳೊಂದಿಗೆ ಎಲೆಕ್ಟ್ರಾನಿಕ್ ಸಿಟಿ ಪ್ರದೇಶದ ಹುಲಿಮಂಗಲ ಗ್ರಾಮಕ್ಕೆ ಧಾವಿಸಿದ ತಹಶೀಲ್ದಾರ್ ಪಿ ದಿನೇಶ್ ಮತ್ತು ಪೊಲೀಸ್ ಅಧಿಕಾರಿಗಳ ತಂಡ ಅಕ್ರಮವಾಗಿ ಕಟ್ಟಡಗಳನ್ನು ಕಟ್ಟಿಕೊಂಡು ಬಾಡಿಗೆಗೆಗೆ ನೀಡಿದ್ದವರ ಖಾಲಿ ಮಾಡಿಸಿ ಒತ್ತುವರಿ ತೆರವುಗೊಳಿಸಿತು.
ಒತ್ತುವರಿ ದಾರ ಹಫೀಜ್ ಹೇಳಿದ್ದು,
ನಾನು ಪಿ ಡಬ್ಲ್ಯೂ ಇಲಾಖೆಯ ನಿವೃತ್ತ ಚೀಫ್ ಇಂಜಿನಿಯರ್ ಆಗಿದ್ದು 2012ರಲ್ಲಿ ಸೇವೆಯಿಂದ ನಿವೃತ್ತಿ ಆದೇ ಆಗ ಎಂಬತ್ತು ಲಕ್ಷಕ್ಕೆ ಇದೇ ಭೂಮಿಯ ಒಂದು ಭಾಗದ 14.08 ಗುಂಟೆ ಜಮೀನು ಇಸ್ಮಾಯಿಲ್ ಸಾಬ್ ರಿಂದ ಖರೀದಿಸಿದ್ದು , ಇಸ್ಮಾಯಿಲ್ ರವರಿಗೆ ಇಲಿಯಾಸ್ ರಿಂದ ಖರೀದಿ ಆಗಿತ್ತು. ಇಸ್ಮಾಯಿಲ್ ಸರಕಾರ ಹರಾಜು ಹಾಕಿದ್ದಾಗ ಹರಾಜಿನಲ್ಲಿ ಇದೇ ಸರ್ವೆನಂಬರ್ ನ ಎರಡು ಎಕರೆ ಕೊಂಡುಕೊಂಡೆ ಎಂದು ತಿಳಿಸಿ ಎಲ್ಲರಿಗೂ ಮಾರಾಟ ಮಾಡಿದ್ದರು ನಂತರ ಹಲವು ಕೈಗಳು ಕ್ರಯ ಮೂಲಕ ಬದಲಾಗಿದ್ದವು,
ಇದೇ ದಾಖಲೆ ನಂಬಿ ಹಫೀಜ್, ಕೋರಮಂಗಲ ನಿವಾಸಿ ಕೆಬಿ ಶೆಟ್ಟಿ, ಮತ್ತು ತುಮಕೂರಿನ ಗುತ್ತಿಗೆದಾರ ನಿವಾಸಿ ಚಂದ್ರಪ್ಪ ಎಂಬುವವರು ಸದರಿ ಭೂಮಿ ಕೊಂಡುಕೊಂಡಿದ್ದೆವು ಅದರಲ್ಲಿ ಒಂದು ಭಾಗ ಮಗಳಿಗೆ ಕೊಟ್ಟಿದ್ದೆ ಆಕೆ ವಾಸದ ಕಟ್ಟಡ ಕಟ್ಟಿಕೋಂಡಿದ್ದಾರೆ ಈಗ ಅದೂ ಹೋಗಲಿದೆ ಹಿಂದೆ ಉಳಿದ ಜಾಗದಲ್ಲಿ ನಾವು ಇದ್ದೇವೆ ಈಗ ಈ ಕುರಿತು ವಿಚಾರಿಸಲು ಮಾರಾಟ ಮಾಡಿದ ಅವರುಗಳು ಬದುಕಿಲ್ಲ ಎಂದು ಹಫೀಜ್ ಅವಲತ್ತುಕೊಂಡರು.
ಹಫೀಜ್ ರಿಗೆ ಸೇರಿದ ಅಂಗಡಿ ಮಳಿಗೆಗಳು, ಅವರ ಅಳಿಯ ಪಾಶಾಗೆ ಸೇರಿದ ಭಾಗಶಃ ಎರಡು ಅಂತಸ್ತಿನ ಕಟ್ಟಡ, ಕೋರಮಂಗಲ ನಿವಾಸಿ ಕೆ,ಬಿ, ಶೆಟ್ಟಿ ರವರಿಗೆ ಸೇರಿದ ಒಂದು ಕಟ್ಟಡ ಹಾಗೂ ಪಕ್ಕದಲ್ಲೇ ಆಪ್ ಮೂಲಕ ಆನ್ಲೈನ್ ಬುಕಿಂಗ್ ಬೈಕ್ ಗಳ ಪಾರ್ಕಿಂಗ್ ಲಾಟ್, ಸುಧಾಕರ್ ರೆಡ್ಡಿಯವರ ಸಿಮೆಂಟ್ ಇಟ್ಟಿಗೆ ಕಾರ್ಖಾನೆ, ಹಾಗೂ ಇದೇ ಸರಕಾರಿ ಭೂಮಿಯ ಹಿಂಬಾಗದಲ್ಲಿ ಅಭಿವೃದ್ಧಿ ಪಡಿಸಿದ್ದ ಹದಿನಾಲ್ಕು ನಿವೇಶನಗಳ ವಸತಿ ಬಡಾವಣೆ, ಸುಮಂತ್ ಎನ್ನುವವರಿಗೆ ಸೇರಿದ ಐದು ಅಂಗಡಿಗಳು, ಸ್ಥಳೀಯ ಸಂಘಟನೆ ಒಂದರ ಪದಾಧಿಕಾರಿ ಎನ್ನಲಾದ ವ್ಯಕ್ತಿ ಕಟ್ಟಿ ಬಾಡಿಗೆಗೆ ನೀಡಿದ್ದ ಐದು ಮನೆಗಳು (ಮನೆಗಳಲ್ಲಿದ್ದವರು ಮೂರು ದಿನದ ಹಿಂದೆ ಖಾಲಿ ಮಾಡಿ ಹೊರಟುಹೋಗಿದ್ದರು) ಇದಕ್ಕೆ ಹೊಂದಿಕೊಂಡಂತೆ ಇದ್ದ ಅರ್ಧ ಕಟ್ಟಿದ ಐದು ಒಂದು ಅಂಕಣದ ಖಾಲಿ ಮನೆಗಳನ್ನು ನೆಲಸಮ ಮಾಡಲಾಯಿತು. ಕಳೆದ ವಾರ ಇದೇ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆ ಗಮನಿಸಿದ್ದ ನಿವಾಸಿಗಳು ಅಂಗಡಿ ಮತ್ತು ಮನೆಗಳಲ್ಲಿ ಯಾವುದೇ ಪರಿಕರ ಇರಲಿಲ್ಲ ಮೊದಲೇ ವಿಷಯ ತಿಳಿದಿದ್ದರಿಂದ ಸ್ವತಃ ಎಲ್ಲ ಸಾಮಾನು ಸಾಗಿಸಿ ಖಾಲಿ ಮಾಡಿಕೊಟ್ಟಿದ್ದರು.
ಉಪವಿಭಾಗಾಧಿಕಾರಿ (ಎ ಸಿ)ಡಾ ಎಂ ಜಿ ಶಿವಣ್ಣ ಮಾತನಾಡಿ ಜಿಲ್ಲಾಧಿಕಾರಿ ಜೆ ಮಂಜುನಾಥ ರವರ ಆದೇಶದಂತೆ ತಹಶೀಲ್ದಾರ್ ದಿನೇಶ್ ಮತ್ತು ತಂಡ ಈ ಪ್ರದೇಶದಲ್ಲಿ ಸರ್ವೇ ಕಾರ್ಯ ನಡೆಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ ಕಳೆದವಾರ ಇದೇ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿದ್ದು ನಿವಾಸಿಗಳಿಗೆ ತಿಳುವಳಿಕೆ ಹೇಳಿ ಅವರಾಗೆ ಸ್ಥಳ ಖಾಲಿ ಮಾಡಿಕೊಡಲು ತಿಳಿಸಿದ್ದೆವು, ಅವರು ಆಗ ಹಾಜರು ಪಡಿಸಿದ ದಾಖಲೆಗಳು ಸಮರ್ಪಕ ಅಲ್ಲ ಎಂದು ಕೂಡಾ ಅವರಿಗೆ ಮನದಟ್ಟು ಮಾಡಿಕೊಟ್ಟಿದ್ದೆವು ಹಾಗಾಗಿ ಕಾರ್ಯಾಚರಣೆ ವೇಳೆ ಗೊಂದಲ ಉಂಟಾಗಲಿಲ್ಲ ಹೆಬ್ಬಾಗೋಡಿ ಪೊಲೀಸ್ ಮತ್ತು ಬಿಎಂಟಿಫ್ ಸಿಬ್ಬಂದಿ ಕೂಡಾ ಸ್ಥಳದಲ್ಲಿ ಹಾಜರಿದ್ದು ಸ್ಥಳೀಯರ ಮನ ವೊಲಿಸಿದರು ಎಂದು ಹೇಳಿದರು.
ಶನಿವಾರ ತೆರವು ಗೊಳಿಸಿ ವಶಪಡಿಸಿಕಿಂಡಿದ್ದು 3 20 ಎಕರೆ ಆಗಿದ್ದು ಇದರ ಅಂದಾಜು ಮೌಲ್ಯ ಹನ್ನೆರಡು ಕೋಟಿ ಎಂದು ತಹಶೀಲ್ದಾರ್ ಪಿ ದಿನೇಶ್ ತಿಳಿಸಿದರು.