ಬೆಂಗಳೂರು; ತಮಗೂ ಶಿಕ್ಷಕಿಯರ ಸ್ಥಾನಮಾನ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಆರೋಪಿಸಿದ್ದಾರೆ.
ಐದು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು. ಶುಕ್ರವಾರದ ಪ್ರತಿಭಟನೆ ವೇಳೆ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ. ಆ ಸಂದರ್ಭದಲ್ಲಿ ಕೆಲವು ಕಾರ್ಯಕರಯರ ಮೇಲೆ ದೌರ್ಜನ್ಯ ನಡೆದಿದೆ ಎಂಬುದು ಆರೋಪ. ಆ ವೇಳೆ ತಾಳಿಯನ್ನೂ ತುಂಡರಿಸಿದ್ದಾರೆಂದು ಅಂಗನವಾಡಿ ಕಾರ್ಯಕರ್ತೆಯರು ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
◆ಅಂಗನವಾಡಿಗಳಿಗೆ ಅನುದಾನವಿಲ್ಲ,
◆ಮೊಟ್ಟೆ ಖರೀದಿಯಲ್ಲಿ ಹಗರಣ,
◆ಮಕ್ಕಳಿಗೆ ಹುಳು ಹಿಡಿದ ಆಹಾರ,
◆ಈಗ ಕಾರ್ಯಕರ್ತೆಯರ ಮೇಲೆ ಅಮಾನುಷ ಹಲ್ಲೆ.@BSBommai ಅವರೇ, ನಿಮ್ಮ ಸರ್ಕಾರ ನಡೆಸಿದ ಈ ದೌರ್ಜನ್ಯಕ್ಕೆ ಕ್ಷಮೆ ಇಲ್ಲ.ಭ್ರಷ್ಟರು, ಬ್ರೋಕರ್‌ಗಳು, ರೌಡಿಗಳಿಗೆ ಘನ ಮರ್ಯಾದೆ ನೀಡುವ ಬಿಜೆಪಿಗೆ ಅಂಗನವಾಡಿ ತಾಯಂದಿರೆಂದರೆ ತಾತ್ಸಾರವೇ? pic.twitter.com/KZqrq7SzMD
— Karnataka Congress (@INCKarnataka) January 21, 2023




































































