ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗಿದ್ದು, ದೇಗುಲ ಲೋಕಾರ್ಪಣೆಗೆ ಅಂತಿಮ ತಯಾರಿ ನಡೆದಿದೆ. ಇದೇ ಸಂದರ್ಭದಲ್ಲಿ ರಾಮನಾಮ ಸಂಕೀರ್ತನೆ, ಹೊಮ-ಹವನ, ಜಪ-ತಾಪಗಳು ನೆರವೇರುತ್ತಿವೆ. ಎಲ್ಲೆಲ್ಲೂ ಶ್ರೀ ರಾಮನ ಕುರಿತಾಗಿಯೇ ಚಿತ್ರಣಗಳು ಗೋಚರಿಸುತ್ತಿವೆ. ಈ ನಡುವೆ ಪಶ್ಚಿಮ ಬಂಗಾಳದ ಕಲಾವಿದರೊಬ್ಬರು ಬಿಸ್ಕೆಟ್’ನಲ್ಲಿ ಶ್ರೀರಾಮ ಮಂದಿರದ ಪ್ರತಿಕೃತಿ ರಚಿಸಿ ಗಮನಸೆಳೆದಿದ್ದಾರೆ. ಸುಮಾರು 20 ಕೆ.ಜಿ ಬಿಸ್ಕೆಟ್ ಬಳಸಿ ರಾಮ ಮಂದಿರ ಪ್ರತಿಕೃತಿಯನ್ನು ರಚಿಸಿದ್ದಾರೇ. ಈ ಕುರಿತ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಈ ಕಲಾವಿದ ಹಂಚಿಕೊಂಡಿದ್ದು, ಈ ಕೈಚಳಕ ಕಂಡು ನೆಟ್ಟಿಗರು ಪುಳಕಗೊಂಡಿದ್ದಾರೆ.
View this post on Instagram