ಬಾಗಲಕೋಟೆ: ರೈತಪರ ನಡೆ, ಸಾರ್ವಜನಿಕ ಹಿತಾಸಕ್ತಿ ವಿಚಾರದಲ್ಲಿ ಉದ್ಯಮ ಕ್ಷೇತ್ರದಲ್ಲಿ ಮುರುಗೇಶ್ ನಿರಾಣಿ ಕೈಗೊಂಡಿರುವ ನಿರ್ಧಾರಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿರಾಣಿಯವರ ಸಾಧನೆ ಬಗ್ಗೆ ಅವರಯ ಕೊಂಡಾಡಿದ್ದಾರೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ಸಮೀಪದ ಕೆರಕಲಮಟ್ಟಿ ಗ್ರಾಮ ಬಳಿ ಕೇದಾರನಾಥ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ಕಾರ್ಖಾನೆಗಳ ಉದ್ಘಾಟನೆ, ಎಥೆನಾಲ್ ಉತ್ಪಾದನೆ ಹೆಚ್ಚಿಸುವ ಘಟಕಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಷಾ ಮಾತನಾಡಿದ ಬಾಗಲಕೋಟೆ ಕ್ಷೇತ್ರದ ಪುಣ್ಯಭೂಮಿಗೆ ವಂದಿಸುತ್ತೇನೆ. ಈ ನಾಡಿನ ಜನರು ರೈತರು ಕೃಷಿಯನ್ನೇ ಅವಲಂಬಿಸಿದ್ದಾರೆ. ಅವರಿಗೆ ಕೋಟಿ ಕೋಟಿ ವಂದನೆಗಳು ಎಂದರು.
ನಿರಾಣಿ ಗ್ರೂಪ್ ಆಫ್ ಇಂಡಸ್ಟ್ರೀಸ್ ಸಾರ್ವಜನಿಕರ ಹಿತಕ್ಕಾಗಿ, ರೈತರ ಹಿತ ಗಮನದಲ್ಲಿಟ್ಟು ಸಾಹಸಕ್ಕೆ ಕೈ ಹಾಕಿದೆ. ಇದಕ್ಕಾಗಿ ಮುರುಗೇಶ ನಿರಾಣಿ ಅವರಿಗೆ ಶುಭ ಹಾರೈಸುತ್ತಿರುವುದಾಗಿ ಅಮಿತ್ ಷಾ ಹೇಳಿದರು. ಇವರು ‘ಉತ್ಸವ ಮೂರ್ತಿ” ಎಂದು ಬಣ್ಣಿಸಿದರು.
ದೇಶದ ಜನರು ಪೆಟ್ರೋಲ್ ಹಾಗೂ ಇತರೇ ವಸ್ತುಗಳಿಗಾಗಿಯೇ ಖರ್ಚು ಮಾಡುವಂತಾಗಿದೆ. ಇಂತಹಾ ಸಂದರ್ಭದಲ್ಲು ಎಥೆನಾಲ್ ಉತ್ಪಾದನೆ ಹೆಚ್ಚಿಸುವ ಕೆಲಸಕ್ಕೆ ಪ್ರಧಾನಿ ಮೋದಿ ಪ್ರೋತ್ಸಾಹ ನೀಡುತ್ತಿದ್ದಾರೆ. ಇದು ಮೋದಿಯವರ ಆತ್ಮನಿರ್ಭರ ಕೆಲಸ. ನಿರಾಣಿ ಗ್ರೂಪ್ ಕೂಡ ಎಥೇನಾಲ್ ಉತ್ಪಾದಿಸಿ ಮೋದಿಯವರ ಆತ್ಮ ನಿರ್ಭರ ಯೋಜನೆಯನ್ನು ಬೆಂಬಲಿಸುತ್ತಿದೆ ಎಂದು ಅಮಿತ್ ಷಾ ಕೊಂಡಾಡಿದರು.
ಎಥೆನಾಲ್‌ನಿಂದ ರೈತರಿಗೂ ಅನುಕೂಲವಿದೆ, ಸಕ್ಕರೆ ಕಾರ್ಖಾನೆಗಳಿಗೂ ಅನುಕೂಲವಾಗಲಿದೆ. ಈ ಕಾರ್ಖಾನೆಯಿಂದ ಉದ್ಯೋಗವೂ ಹೆಚ್ಚಲಿದೆ ಎಂದು ನಿರಾಣಿ ಅವರ ಮುಂಧಾಲೋಚನೆ ಬಗ್ಗೆ ಹಾಡಿ ಹೊಗಳಿದರು.