ಉಡುಪಿ: ಮಣಿಪಾಲ ಮಂಚಿಯ ಶ್ರೀ ದುರ್ಗಾ ಮ್ಯೂಸಿಕ್ ಮೀಟ್ ಆಶ್ರಯದಲ್ಲಿ 79ನೇ ಸ್ವಾತಂತ್ರ್ಯ ಪ್ರಯುಕ್ತ ನಡೆದ ಅಮರವೀರ ಗೀತ ಗಾಯನ ಸ್ಪರ್ಧೆ ಗಮನಸೆಳೆಯಿತು.
ಮಂಚಿಯ ದುಗ್ಲಿ ಪದವಿನ ಯುವ ಸೇವಾ ಸಂಘದ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಮಣಿಪಾಲ ವ್ಯಾಲಿ, ಲಯನ್ಸ್ ಕ್ಲಬ್ ಸಂತೆಕಟ್ಟೆ ಲಯನ್ಸ್ ಕ್ಲಬ್ ಕಲ್ಯಾಣಪುರ, ಯುವಜನ ಸೇವಾ ಸಂಘ ದುಗ್ಲಿ ಪದವು ಮಂಚಿ ಮೊದಲಾದ ಸಂಘ-ಸಂಸ್ಥೆಗಳು ಕೈಜೋಡಿಸಿದ್ದವು.
ಯುವಜನ ಸೇವಾ ಸಂಘದ ಅಧ್ಯಕ್ಷ ದಿನೇಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ದುರ್ಗಾ ಮ್ಯೂಸಿಕ್ ಮಿಟ್ ನ ಮುಖ್ಯಸ್ಥ ತೇಜಸ್ವಿನಿ ಅನಿಲ್ ರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಉಡುಪಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಹಾಗೂ ಕಾಂಗ್ರೆಸ್ ಮುಖಂಡ ಸತೀಶ್ ಕುಮಾರ್ ಮಂಚಿ ವಿಜೇತರಿಗೆ ಬಹುಮಾನ ವಿತರಿಸಿದರು.
ಕಲ್ಯಾಣಪುರ ಲಯನ್ಸ್ ಅಧ್ಯಕ್ಷ ರಿಚರ್ಡ್ ಕ್ರಾಸ್ಟೋ, ಸಂತೆಕಟ್ಟೆ ಲಯನ್ಸ್ ಅಧ್ಯಕ್ಷ ಜ್ಯೋತಿ ಶೇಟ್, ಮಣಿಪಾಲ ವ್ಯಾಲಿ ಇದರ ಸದಸ್ಯೆ ಸಾಧನ ಕಿಣಿ, ಲಯನ್ಸ್ ಕ್ಲಬ್ ಮಣಿಪಾಲ ಯುಕ್ತಿ ಸದಸ್ಯರಾದ ವಿದ್ಯಾದರಿ, ಯುವಜನ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ ವಿಕ್ರಂ ಮಂಚಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕರಾದ ಲಯನ್ ನಂದಕಿಶೋರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಿಲ್ ರಾಜ್, ಶ್ರೀಲತಾ ಹಾಗೂ ಡಾ. ಸಚಿನ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.
- 6 ರಿಂದ 12 ವರ್ಷದೊಳಗಿನ ವಿಭಾಗದಲ್ಲಿ
ಮೈಥಿಲಿ ಆಚಾರ್ಯ ಪ್ರಥಮ,
ವೈಷ್ಣವಿ ದ್ವಿತೀಯ,
ಅಶ್ವಿಕ ತೃತೀಯ. - 12 ರಿಂದ 18 ವರ್ಷದೊಳಗಿನ ವಿಭಾಗದಲ್ಲಿ
ತುಷಾರ ಶಂಕರ್ ಪ್ರಥಮ,
ನಿರಂಜನ್ ದ್ವಿತೀಯ,
ವಿದ್ಯಾಶ್ರೀ ತೃತೀಯ - ಸಮಾಧಾಕರ ಬಹುಮಾನ:
ಸೆಲ್ವಿನ್ ಡಿಸೋಜಾ,
ಕಶ್ವಿ ರಾವ್,
ಶಮಿಕ ಎಸ್ ಪೂಜಾರಿ,
ಪಿ ಪ್ರಣವ್,
ಸುಜನಾ.
ಇದೇ ಸಂದರ್ಭದಲ್ಲಿ ರಂಗಸೌರಭ ಬಿರುದಾಂಕಿತ ರಂಗಭೂಮಿ ಕಲಾವಿದ ವಿಕ್ರಮ್ ಮಂಚಿ ದಂಪತಿಯನ್ನು ಸನ್ಮಾನಿಸಲಾಯಿತು.