ಬೆಂಗಳೂರು: ಕ್ರಿಯಾಶೀಲತೆಯ ಪ್ರತಿಂಬವೇ ಶ್ರೀನಿವಾಸ್.. ಕಲೆಯ ಒಳಗೊಂದು ದೇಗುಲ ಹುಡುಕಾಡುತ್ತಾ ಸಾಗಿರುವ ಶ್ರೀನಿವಾಸ್ ಇದೀಗ ‘ಅಕ್ಷಿ’ಯೊಳಗೆ ಕೇಂದ್ರೀಕೃತವಾಗಿದ್ದಾರೆ.
ಕಲಾದೇಗುಲ ಶ್ರೀನಿವಾಸ್ ಅವರ ‘ಅಕ್ಷಿ’ಯನ್ನು ಈ ಪ್ರಪಂಚ ಹೇಗೆ ಕಾಣುತ್ತೋ ಗೊತ್ತಿಲ್ಲ. ಆದರೆ ‘ಅಕ್ಷಿ’ ಮಾತ್ರ ಎಲ್ಲರ ಕೌತುಕದ ಕೇಂದ್ರಬಿಂದುವಾಗಿದೆ ಎಂಬುದು ಮಾತ್ರ ಸತ್ಯ.
ಶ್ರೀನಿವಾಸ್ ಒಂದೊಮ್ಮೆ ಆ್ಯಂಕರ್. ಆ ವೇಳೆ ‘ಉದಯ ನ್ಯೂಸ್’ನಲ್ಲಿ ಸುದ್ದಿ ನಿರೂಪಕರಾಗಿ ನೂರಾರು ಸಿನಿಮಾಗಳನ್ನು ವರ್ಣಿಸುತ್ತಿದ್ದ ಇದೇ ಶ್ರೀನಿವಾಸ್ ಅವರೇ ಸಿನಿಮಾ ಮಾಡಿ ದೇಶವಿದೇಶಗಳ ಗಮನಸೆಳೆದಿದ್ದಾರೆ. ಅರ್ಥಾತ್, ಕಲೆಗಾಗಿ ದೇಗುಲ ಹುಡುಕುತ್ತಾ ಸಾಗಿದ ಶ್ರೀನಿವಾಸ್ ಇದೀಗ ಕಾಲಾದೇಗುಲದಲ್ಲಿ ಇದ್ದುಕೊಂಡು ‘ಅಕ್ಷಿ’ಯನ್ನು ತೇಲಿಬಿಟ್ಟಿದ್ದಾರೆ. ಅವರ ಶ್ರಮ, ಪ್ರತಿಭೆ, ಪ್ರಬುದ್ಧರ ಸಾಂಗತ್ಯದ ಸಮ್ಮಿಳನವೇ ಈ ‘ಅಕ್ಷಿ’.
ಕನ್ನಡ ಸಿನಿಮಾವು ರಂಗದ ಕುತೂಹಲವನ್ನು ರೋಚಕ ಘಟ್ಟಕ್ಕೆ ಕೊಂಡೊಯ್ದಿದೆ. ಅದಕ್ಕೆ ಫುಷ್ಟಿ ನೀಡಿರುವುದು ಈ ಟ್ರೈಲರ್.
ಏನಿದು ಅಕ್ಷಿ..?
ಕಲಾದೇಗುಲ ಶ್ರೀನಿವಾಸ್ ಅವರ ‘ಅಕ್ಷಿ‘ ಸಿನಿಮಾ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲದ ಕೇಂದ್ರಬಿಂದು.
ರಾಷ್ಟ್ರ ಪ್ರಶಸ್ತಿ ಪಡೆದಿರುವ ‘ಅಕ್ಷಿ’ ಇದೀಗ ಬಿಡುಗಡೆಯ ಮುಹೂರ್ತಕ್ಕಾಗಿ ಕಾದು ಕುಳಿತಿದೆ. ಅಂದ ಹಾಗೆ ‘ಅಕ್ಷಿ’ಯ ಕಥಾಹಂದರದ ಬಗ್ಗೆ ಎಲ್ಲರಲ್ಲೂ ಕುತೂಹಲವಿದೆ. ಅದನ್ನು ಬಿಚ್ಚಿಡುವ ಪ್ರಯತ್ನವನ್ನು ನಾವಂತೂ ಮಾಡಲ್ಲ. ಆದರೂ ಪುಟ್ಟ ಸುಳಿವನ್ನು ನಾವು ನೀಡುತ್ತಿದ್ದೇವೆ. ಕಣ್ಣಿಲ್ಲದೆ ಏನೂ ಇಲ್ಲ ಎಂಬುದು ಕಹಿಸತ್ಯ. ಕಣ್ಣಿಗಾಗಿ ಚಿತ್ತ ಹರಿಸುವ ಪ್ರಯತ್ನದಲ್ಲಿ ಏನೆಲ್ಲಾ ಸವಾಲುಗಳಿರುತ್ತೋ ಅದೆಲ್ಲವನ್ನೂ ಈ ಸಿನಿತಂಡ ಈ ಮೂವಿಯಲ್ಲಿ ಅದ್ಭುತವಾಗಿ ತೋರಿಸುವ ಪ್ರಯತ್ನ ಮಾಡಿದೆ.