ಬೆಂಗಳೂರು: ಕನ್ನಡ ಸಿನಿಮಾ ಲೋಕದ ಅಭಿನಯ ಶಾರದೆ ಜಯಂತಿ ಇನ್ನಿಲ್ಲ. ದಕ್ಷಿಣ ಭಾರತದ ಬಹುಭಾಷಾ ತಾರೆ 76 ವರ್ಷ ಪ್ರಾಯದ ಅವರು ಕೆಲಸಮಯದಿಂದ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇತ್ತೀಚೆಗಷ್ಟೆ ಮನೆಗೆ ವಾಪಾಸಾಗಿದ್ದರು. ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಕಮಲ ಕುಮಾರಿ ಎಂಬ ಮೂಲ ಹೆಸರಿನ ಅವರು, 1945ರ ಜನವರಿ 6ರಂದು ಬಳ್ಳಾರಿಯಲ್ಲಿ ಜನಿಸಿದ್ದರು. ಸಿನಿ ಪಯಣದ ನಡುವೆ ಅವರು ಜಯಂತಿ ಹೆಸರಿನಲ್ಲಿ ಗುರುತಿಸಿಕೊಂಡು ಚಿರಪರಿಚಿತರಾದರು.
ಕನ್ನಡ, ಹಿಂದಿ, ತಮಿಳು, ಮಲಯಾಳಂ, ತೆಲುಗು, ಮರಾಠಿ ಸಹಿತ ಆರು ಭಾಷೆಗಳ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಕನ್ನಡದಲ್ಲೂ 190ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಜಯಂತಿ ಅಭಿನಯಿಸಿದ್ದು ಸುಮಾರು 45 ಸಿನಿಮಾಗಳಲ್ಲಿ ಅವರು ವರನಟ ರಾಜ್ ಕುಮಾರ್ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ.. 500ಕ್ಕೂ ಹೆಚ್ಚು ಸಿನಿಮಾ, ಆರು ಭಾಷೆಗಳಲ್ಲಿ ಅಭಿನಯ.. ಜಯಂತಿ ಸಿನಿ ಪಯಣವೇ ಅದ್ಭುತ..
ನಟಿ ಮಾತ್ರವಲ್ಲ, ನಿರ್ದೇಶಕಿಯಾಗಿಯೂ ಅವರು ಸಿನಿಲೋಕದ ಸೇವೆ ಮಾಡಿದ್ದಾರೆ. ಅಭಿನಯ ಶಾರದೆ ಖ್ಯಾತಿಯ ಜಯಂತಿ ಅವರು 5 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಜಯಂತಿ ನಿಧನಕ್ಕೆ ಗಣ್ಣರನೇಕರು ಕಂಬನಿ ಮಿಡಿದಿದ್ದಾರೆ.
ಅಭಿನಯದಲ್ಲಿ ಶಾರದೆ,ಕನ್ನಡ ಚಿತ್ರ ರಸಿಕರಿಗೆ ಬೆಳ್ಳಿ ಪರೆದೆಯ ಚಿತ್ರದುರ್ಗದ ಓಬವ್ವ ,ಜಯಂತಿ ಅವರ ಹಠಾತ್ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಾಲಾರದ ನಷ್ಟ.ಅಭಿನಯ ಕ್ಷೇತ್ರದಲ್ಲಿ ಸಂದಿರುವ ಹಲವು ಪ್ರಶಸ್ತಿ ಗೌರವಗಳಲ್ಲದೆ ಅಭಿನಯ ಶಾರದೆ ಅವರನ್ನು ಮೈಸೂರು ವಿ.ವಿ. ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದು ಅವರ ನಟನೆಗೆ ಸಿಕ್ಕ ಗೌರವವಾಗಿತ್ತು
(1/4)— Dr. Murugesh R Nirani (@NiraniMurugesh) July 26, 2021