ಬೆಂಗಳೂರು: ಕನ್ನಡ ಸಿನಿಮಾ ಲೋಕದ ಅಭಿನಯ ಶಾರದೆ ಜಯಂತಿ ಇನ್ನು ನೆನಪು ಮಾತ್ರ. ದಕ್ಷಿಣ ಭಾರತದ ಬಹುಭಾಷಾ ತಾರೆ ಜಯಂತಿ ಅವರ ಮೂಲ ಹೆಸರು ಕಮಲ ಕುಮಾರಿ.
https://youtu.be/-03HeJjXR1E
1945ರ ಜನವರಿ 6ರಂದು ಬಳ್ಳಾರಿಯಲ್ಲಿ ಜನಿಸಿದ್ದರು. ಸಿನಿ ಪಯಣದ ನಡುವೆ ಅವರು ಜಯಂತಿ ಹೆಸರಿನಲ್ಲಿ ಗುರುತಿಸಿಕೊಂಡು ಚಿರಪರಿಚಿತರಾದರು.
ಕನ್ನಡ, ಹಿಂದಿ, ತಮಿಳು, ಮಲಯಾಳಂ, ತೆಲುಗು, ಮರಾಠಿ ಸಹಿತ ಆರು ಭಾಷೆ, 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಕನ್ನಡದಲ್ಲೂ 190ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಜಯಂತಿ ಅಭಿನಯಿಸಿದ್ದು ಸುಮಾರು 45 ಸಿನಿಮಾಗಳಲ್ಲಿ ಅವರು ವರನಟ ರಾಜ್ ಕುಮಾರ್ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಡಾ.ರಾಜ್ ಜೊತೆಗಿನ ಅಭಿನಯದ ಹಾಡು
ನಟಿ ಮಾತ್ರವಲ್ಲ, ನಿರ್ದೇಶಕಿಯಾಗಿಯೂ ಅವರು ಸಿನಿಲೋಕದ ಸೇವೆ ಮಾಡಿದ್ದಾರೆ. ಅಭಿನಯ ಶಾರದೆ ಖ್ಯಾತಿಯ ಜಯಂತಿ ಅವರು 5 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.
ತಮಿಳು ಸಿನಿಮಾದಲ್ಲೂ ಹೆಗ್ಗುರುತು..