ಮುಂಬೈ: ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಇನ್ನಿಲ್ಲ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 98 ವರ್ಷ ಹರೆಯದ ಮೇರು ನಟ ದಿಲೀಪ್ ಕುಮಾರ್ ಮುಂಬೈನಲ್ಲಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಅನಾರೋಗ್ಯ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರ ಆರೋಗ್ಯ ಸ್ಥಿತಿ ಕೆಲವು ದಿನಗಳಿಂದ ಬಿಗಡಾಯಿಸಿತ್ತು. ಅವರು ಇಂದು ಬೆಳಿಗ್ಗೆ ಕೊನೆಯುಸಿರೆಳೆದರು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ದಿಲೀಪ್ ಕುಮಾರ್ ನಟನೆಯ ಹಾಡು
ದೇವ್ ದಾಸ್, ರಾಮ್ ಔರ್ ಶ್ಯಾಮ್, ಗಂಗಾ ಜಮುನಾ, ಶಕ್ತಿ, ಕರ್ಮ, ಸೌಧಾಗರ್ ಸಹಿತ ಹಲವಾರು ಜನಪ್ರಿಯ ಚಿತ್ರಗಳಲ್ಲಿ ಅವರು ನಟಿಸಿದ್ದರು. ದಿಲೀಪ್ ಕುಮಾರ್ ನಿಧನಕ್ಕೆ ಬಾಲಿವುಡ್ ಗಣ್ಯರು ಕಂಬನಿ ಮಿಡಿದಿದ್ದಾರೆ. 80ರ ದಶಕದಲ್ಲಿ ಅವರ ಸಿನಿಮಾಗಳು ಚಿತ್ರರಂಗದ ಖ್ಯಾತಿಗೆ ಗರಿ ಇಟ್ಟಂತಿತ್ತು ಎಂದು ಬಾಲಿವುಡ್ ಗಣ್ಯರು ಬಣ್ಣಿಸಿದ್ದಾರೆ.
ದಿಲೀಪ್ ಕುಮಾರ್ ನಟನೆಯ ಹಾಡು
ದಿಲೀಪ್ ಕುಮಾರ್ ಅವರ ಮೊದಲ ಹೆಸರು ಯೂಸೂಫ್ ಖಾನ್. ಇವರ ನಟನೆಯ ಹಲವು ಚಿತ್ರಗಳು ದಾಖಲೆ ಬರೆದಿದ್ದವು. 1998ರಲ್ಲಿ ತೆರೆಕಂಡ ‘ಕಿಲಾ’ ಅವರ ಕೊನೆಯ ಚಿತ್ರವಾಗಿತ್ತು.