ದಾವಣಗೆರೆ: ಚನ್ನಗಿರಿ ಸಮೀಪ ಇಙದು ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.
ಚನ್ನಗಿರಿ ಸಮೀಪದ ಗುಳ್ಳೇಹಳ್ಳಿ ಬಳಿ ಟ್ರ್ಯಾಕ್ಟರ್ ಮತ್ತು ಮಾರುತಿ ಓಮಿನಿ ವ್ಯಾನ್ ನಡುವೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.
ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಸಂತೇಬೆನ್ನೂರು ಕಡೆಯಿಂದ ಚನ್ನಗಿರಿ ಕಡೆಗೆ ತೆರಳುತ್ತಿದ್ದ ಮಾರುತಿ ಓಮ್ನಿ ಭತ್ತದ ಹುಲ್ಲನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ಗೆ ಡಿಕ್ಕಿಯಾಗಿದೆ ಎನ್ನಲಾಗಿದೆ.
ನಾರಶೆಟ್ಟಿಹಳ್ಳಿ ಗ್ರಾಮದ ಗಂಗಮ್ಮ (80), ರುದ್ರೇಶಪ್ಪ (64), ಮಲ್ಲಿಕಾರ್ಜುನ್ (62) ಎಂಬವರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಚನ್ನಗಿರಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡರಸಿದ್ದಾರೆ.



















































