ಬೆಂಗಳೂರು: ನೂತನ ಶೈಕ್ಷಣಿಕ ವರ್ಷ ಮುಂದಿನ ತಿಂಗಳಿನಿಂದಲೇ ಆರಭವಾಗಲಿದೆ. ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಸುತ್ತೋಲೆಯನ್ನು ಹೊರಡಿಸಿದ್ದು, 2022-23ನೇ ಸಾಲಿನ ಶೈಕ್ಷಣಿಕ ಅವಧಿಯನ್ನು ಕಲಿಕಾ ಚೇತರಿಕೆ ವರ್ಷವೆಂದು ಘೋಷಿಸಿದೆ.
2022-23ನೇ ಸಾಲಿನ ಶಾಲಾ ವೇಳಾಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಪ್ರಕಟಿಸಿದ್ದು, ಮೇ 15ರಿಂದ ಶೈಕ್ಷಣಿಕ ವರ್ಷ ಆರಂಭವಾಗಲಿದೆ.
ವೇಳಾಪಟ್ಟಿಯ ಮುಖ್ಯಾಂಶ ಹೀಗಿದೆ:
- ಶೈಕ್ಷಣಿಕ ವರ್ಷದ ಮೊದಲ ಅವಧಿಯು ಮೇ 16ರಿಂದ ಅಕ್ಟೋಬರ್ 2ರ ವರೆಗೆ.
- ಅಕ್ಟೋಬರ್ 3ರಿಂದ 16ರ ವರೆಗೆ ದಸರಾ ರಜೆ.
- 2ನೇ ಅವಧಿಯು ಅಕ್ಟೋಬರ್ 27ರಿಂದ 2023ರ ಎಪ್ರಿಲ್ 10ರ ವರೆಗೆ.
- 2023ರ ಎಪ್ರಿಲ್ 11ರಿಂದ ಮೇ 28ರ ವರೆಗೆ ಬೇಸಗೆ ರಜೆ.