ಬೆಂಗಳೂರು: ಸಾಮಾಜಿಕ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಭ್ರಷ್ಟಾಚಾರ ವಿರೋಧಿ ಸಿದ್ಧಾಂತದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಬೆಂಗಳೂರಿನಲ್ಲಿ ವಿನೂತನ ರೀತಿಯಲ್ಲಿ ನಡೆಸಿದ ಪ್ರತಿಭಟನೆ ದೇಶದ ಗಮನಸೆಳೆಯಿತು.
ರಸ್ತೆಗಳಲ್ಲಿರುವ ಗುಂಡಿಯ ಸುತ್ತ ರಂಗೋಲಿ ಹಾಕಿ, ಹೂವಿನಿಂದ ಅಲಂಕರಿಸಿ, ಆರತಿ ಎತ್ತಿ ಪೂಜೆ. ಅದರ ಸುತ್ತಮುತ್ತ ಸರ್ಕಾರದ ವಿರುದ್ಧ ಬರಹಗಳಿರುವ ಬೋರ್ಡ್ ಹಿಡಿದು ನಿಂತ ಬಿಳಿ ಟೋಪಿಧಾರಿಗಳು. ಅವರಿಂದ ಭ್ರಷ್ಟಾಚಾರದ ವಿರುದ್ಧ ಆಕ್ರೋಶದ ಘೋಷಣೆಗಳು.
ಇದು ಆಮ್ ಆದ್ಮಿ ಪಾರ್ಟಿಯು ಬುಧವಾರ ಬೆಂಗಳೂರಿನಾದ್ಯಂತ ಹಮ್ಮಿಕೊಂಡಿದ್ದ ರಸ್ತೆಗುಂಡಿ ಹಬ್ಬ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯ.
There are millions life threatening potholes spread across Bengaluru
and our MLAs are spending millions on getting new car or ne bugalows.#PotholeHabba pic.twitter.com/ImD9FYsP9a— Bhogesh Solapur (@Being_AAPian) October 20, 2021
ವಿಜಯನಗರ ಕ್ಷೇತ್ರದಲ್ಲಿ ಅರ್ಚನಾ, ಚಾಮರಾಜಪೇಟೆ ಕ್ಷೇತ್ರದಲ್ಲಿ ಜಗದೀಶ್ ಚಂದ್ರ, ಚಿಕ್ಕಪೇಟೆ ಕ್ಷೇತ್ರದಲ್ಲಿ ಪ್ರಕಾಶ್ ನಾಗರಾಜ್, ಗಾಂಧಿನಗರ ಕ್ಷೇತ್ರದಲ್ಲಿ ರಾಜಶೇಖರ್ ದೊಡ್ಡಣ್ಣ, ಗೋಪಿನಾಥ್, ಉಷಾ ಮೋಹನ್, ಯಲಹಂಕ ಕ್ಷೇತ್ರದಲ್ಲಿ ಸುಹಾಸಿನಿ ಫಣಿರಾಜ್, ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಪಲ್ಲವಿ ಚಿದಂಬರಂ, ಸಿ.ವಿ ರಾಮನ್ ಕ್ಷೇತ್ರದಲ್ಲಿ ಪ್ರಶಾಂತಿ, ಪುಲಿಕೇಶಿನಗರ ಕ್ಷೇತ್ರದಲ್ಲಿ ಸಶಾವಲ್ಲಿ, ಮೊಹಮ್ಮದ್ ಅಸದ್, ಮಹದೇವಪುರ ಕ್ಷೇತ್ರದಲ್ಲಿ ಅಶೋಕ್ ಮೃತ್ಯುಂಜಯ ಹಾಗೂ ಮುಖಂಡರಾದ ಜಗದೀಶ್ ಬಾಬು, ಆನಂದ್ ವಾಸುದೇವನ್, ರಾಜ್ಯ ಯುವ ಘಟಕದ ಅಧ್ಯಕ್ಷ ಮುಕುಂದ್ ಗೌಡ, ಬೆಂಗಳೂರು ಆಟೋ ಚಾಲಕರ ಘಟಕದ ಉಸ್ಮಾನ್ ಹಾಗೂ ಇನ್ನಿತರೆ ಮುಖಂಡರ ನೇತೃತ್ವದಲ್ಲಿ ರಸ್ತೆಗುಂಡಿ ಹಬ್ಬ ನೆರವೇರಿತು.