ಬೆಂಗಳೂರು: ಅತ್ಯಂತ ಕಿರಿಯ ಭಾರತೀಯ ಕವಯತ್ರಿ ಎಂಬ ಕೀರ್ತಿಗೆ ಪಾತ್ರವಾಗಿರುವ ವಿದ್ಯಾರ್ಥಿನಿ ಕುಮಾರಿ ಅಮನ ಜೆ.ಕುಮಾರ್. ಅಂತಾರಾಷ್ಟ್ರೀಯ ವಿಶ್ವ ದಾಖಲೆ ಮೂಲಕ ಗಮನಕೇಂದ್ರೀಕರಿಸಿದ್ದರು. ಅತ್ಯಂತ ಕಿರಿಯ ಕವಿಯತ್ರಿ ಮಾತ್ರವಲ್ಲ ವಂಡರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಅತ್ಯಂತ ಕಿರಿಯ ಲೇಖಕಿ ಎಂದು ಗುರುತಿಸಲ್ಪಟ್ಟು ದಾಖಲೆ ಬರೆದಿದ್ದಾರೆ. ಅವರೀಗ ಮತ್ತೆ ಸಾರಸ್ವತ ಲೋಕದ ಚಿತ್ತ ಸೆಳೆದಿದ್ದಾರೆ.
ಕುಮಾರಿ ಅಮನ ಜೆ.ಕುಮಾರ್ ಅವರ ನಾಲ್ಕನೆ ಪುಸ್ತಕ ‘Galore of Mysteries’ ಅನ್ನು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಬಿಡುಗಡೆ ಮಾಡಿದರು.
ರಾಜ್ಯಪಾಲರಾದ. ಥಾವರ್ ಚಂದ್ ಗೆಹ್ಲೋಟ್ ರವರ ಸಂದೇಶವು ಈ ಪುಸ್ತಕದಲ್ಲಿ ಪ್ರಕಟವಾಗಿದೆ. ಈ ಪುಸ್ತಕಕ್ಕೆ ಮುನ್ನುಡಿಯನ್ನು ಡಾ. ಪಿ.ವೀರ ಮುತ್ತುವೇಲ್, ಪ್ರಾಜೆಕ್ಟ್ ಡೈರೆಕ್ಟರ್, ಚಂದ್ರಯಾನ-3 , ISRO ರವರು ಬರೆದಿದ್ದಾರೆ.
ಈ ಪುಸ್ತಕ ಅಮನಳ 4ನೇ ಪುಸ್ತಕ ಹಾಗೂ ಮೊದಲ fiction writing ಪುಸ್ತಕವಾಗಿದೆ. ಅಮನ ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ ಸ್ಕೂಲ್ ನಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಹಾರ್ವಡ್ ವಿಶ್ವ ವಿದ್ಯಾಲಯದಿಂದ “Masterpieces of World Literature” ಕೋರ್ಸ್ ಮಾಡಿದ್ದಾರೆ.
“ಅಮನಾ ಅವರ Galore of Mysteries” ಪುಸ್ತಕವು, ಕವನ ಹಾಗೂ ಕಿರು ಕಥೆಗಳ ಸಂಗ್ರಹವಾಗಿದ್ದು ರಹಸ್ಯಗಳ ಕೌತುಕವನ್ನು ಒಳಗೊಂಡಿದೆ. ಇದು ಸಾಹಸಮಯವಾಗಿದ್ದು ಭಯಾನಕ ಹಾಗೂ ಹಾಸ್ಯದಿಂದ ಕೂಡಿ ಓದುಗರನ್ನು ಪ್ರತಿಪುಟದಲ್ಲಿಯೂ ಕಲ್ಪನೆಯ ಲೋಕಕ್ಕೆ ಕರೆದೊಯ್ಯುವಂತಿದೆ..
ಡಾ. ಲತಾ ಟಿ.ಎಸ್, ಹಾಗೂ ಜೈವಂತ್ ಕುಮಾರ್ ಅವರ ಪುತ್ತಿ ಅಮನ 6ನೇ ತರಗತಿಯಲ್ಲಿದ್ದಾಗ ಇಂಗ್ಲೀಷ್ ಕವನಗಳನ್ನು ಬರೆಯಲು ಪ್ರಾರಂಭಿಸಿದ್ದು, ಪ್ರಥಮ ಕವನ “Echoes of Soulful Poems” ಎರಡನೇ “World Amidst the Words” ಹಾಗೂ “Lafzon ki Mhfil “ ಮೂರನೇ ಹಿಂದಿ ಕವನ ಸಂಕಲನವು ಈಗಾಗಲೇ ಅಮೇಜಾನ್, ಪ್ಲಿಪ್ ಕಾರ್ಟ್ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಲಭ್ಯವಿರುತ್ತವೆ.
ಅಮನಾ ದಾಖಲೆಗಳು:
ಭಾರತದ ಕಿರಿಯ ಕವಯಿತ್ರಿ ಇಂಡಿಯಾ ಬುಕ್ ಆಪ್ ರೆಕಾಡ್ಸ್ -2021
ಏಷ್ಯಾ ಬುಕ್ ಆಪ್ ರೆಕಾಡ್ಸ್-2021 ಕಿರಿಯ ವಯಸ್ಸಿನಲ್ಲಿ ಕವಿತೆಗಳನ್ನು ಬರೆದಿರುವುದು.
ಕೌಟಿಲ್ಯ ವರ್ಷದ ಕಿರಿಯ ಕವಿ ಪ್ರಶಸ್ತಿ – 2021 ಗೋವಾ ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ನೋಬಲ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲೆ.
ವರ್ಲ್ಡ್ ರೆಕಾರ್ಡ್ ವಿಶ್ವವಿದ್ಯಾಲಯ ಪ್ರವೇಶ 2022, ಸತತ ವರ್ಷಗಳಲ್ಲಿ ಕವನ ಸಂಕಲನ ಪುಸ್ತಕಗಳನ್ನು ಪ್ರಕಟಿಸಿದ ಕಿರಿಯ ಕವಿಯಿತ್ರಿ.
ಗೋಲ್ಡನ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ಸ್ 2022 ನಲ್ಲಿ ದಾಖಲೆ ಬರೆದಿದ್ದಾರೆ.
ವಂಡರ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ಸ್ ಕಿರಿಯ ಕವಯತ್ರಿ.
ಇಂಟರ್ನ್ಯಾಷನಲ್ ಬುಕ್ಅಪ್ ರೆಕಾರ್ಡ್ಸ್ ಕಿರಿಯ ಕವಿಯತ್ರಿ..
ಈವರೆಗೂ ಅಮನ ಇಂಗ್ಲಿಷ್ ಮತ್ತು ಹಿಂದಿಯಲ್ಲಿ 500 ಕ್ಕೂ ಹೆಚ್ಚು ಕವನಗಳನ್ನು ಬರೆದಿದ್ದಾರೆ.

























































ಅಮನಾ ದಾಖಲೆಗಳು:





