ದೆಹಲಿ: ಭಾರತವೂ ಕೊರೋನಾ ಕರಾಳತೆಗೆ ಸಾಕ್ಷಿಯಾಗುತ್ತಿದ್ದು ಸೋಂಕಿನಿಂದಾಗಿ ಸಂಭವಿಸುತ್ತಿರುವ ಮಾರಣ ಹೋಮ ಮುಂದುವರಿದೆ. ಭಾನುವಾರ ಕೂಡ ಕೊರೋನಾ ಕುರಿತ ಆತಂಕದ ಸುದ್ದಿ ಅಪ್ಪಳಿಸಿದೆ.
ಕೋವಿಡ್-19 ಸೋಂಕಿತರ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದೆ, ಭಾನುವಾರ ಬೆಳಿಗ್ಗೆ ಆರೋಗ್ಯ ಇಲಾಖೆ ನೀಡಿದ ಮಾಹಿತಿಯಂತೆ ಸೋಂಕು ಅಷ್ಟೇ ಅಲ್ಲ ಮರಣ ಪ್ರಮಾಣವೂ ಹೆಚ್ಚಿದೆ. ಕಳೆದ 24 ತಾಸುಗಳಲ್ಲಿ ವಿವಿಧ ರಾಜ್ಯಗಳಲ್ಲಿ ಸುಮಾರು 38,902 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 10,77,618ಕ್ಕೆ ಏರಿಕೆಯಾಗಿದೆ.
ಈ ನಡುವೆ ಈ ಅವಧಿಯಲ್ಲಿ ಉಮಾರು 543 ಮಂದಿಸೋಂಕಿಗೆ ಬಲಿಯಾಗಿದ್ದು, ದೇಶದಲ್ಲಿ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 26,816ಕ್ಕೆ ಏರಿಕೆಯಾಗಿದೆ.
ಇದೇ ವೇಳೆ 10,77,618 ಮಂದಿ ಸೋಂಕಿತರ ಪೈಕಿ 6,77,423 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, 3,73,379 ಮಂದಿ ಇನ್ನೂ ಸೋಂಕಿನಿಂದ ಬಳಲುತ್ತಿದ್ದಾರೆ.