ಮಾರಕ ವೈರಸ್ ಕೊರೋನಾದಿಂದ ಇಡೀ ವಿಶ್ವವೇ ಲಾಕ್ ಡೌನ್ ಆದ್ರು ;ಕೇಂದ್ರಸರ್ಕಾರ ತನ್ನ ಬೊಕ್ಕಸ ತುಂಬಿಸೋ ಕೆಲಸ ಮಾತ್ರ ಬಿಟ್ಟಿಲ್ಲ.ಕಿಲ್ಲರ್ ವೈರಸ್‍ನಿಂದಾಗಿ ಆರ್ಥಿಕ ವಾಣಿಜ್ಯ ವಹಿವಾಟುಗಳು ಕಳೆದ 50 ದಿನಗಳಿಂದ ಸ್ಥಗಿತಗೊಂಡಿದ್ದು ದೇಶದ ಪ್ರಜೆಗಳು ಒಂದು ಹೊತ್ತಿನ ಊಟಕ್ಕೆ ಪರಿತಪಿಸೋದರ ಜೊತೆಗೆ ಕೊರೋನಾ ಎಂಬ ಮಾಹಾಮಾರಿಗೆ ಸೊರಗಿ ಹೋಗಿದ್ದಾರೆ.
ಘೋ
ಇದರ ನಡುವೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಪಾತಾಳಕ್ಕೆ ಕುಸಿದ್ರು; ನಮ್ಮ ಭಾರತ ದೇಶದಲ್ಲಿ ಮಾತ್ರ ಪೆಟ್ರೋಲ್ -ಡಿಸೇಲ್ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತ ಇದ್ದು ; ಜನರಿಗೆ ಶಾಕ್ ಕೊಡ್ತಿದೆ. ಹಿಂದೆಂದೂ ಕಾಣದ ಮಟ್ಟಿಗೆ ಕಚ್ಚಾತೈಲಗಳ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರಸರ್ಕಾರ ಏರಿಸಿದ್ದು; ಮಂಗಳವಾರ ಮಧ್ಯರಾತ್ರಿಯಿಂದಲೇ ಪೆಟ್ರೋಲ್ ಲೀಟರ್‍ಗೆ 10 ರೂ. ಹಾಗೂ ಡೀಸೆಲ್ ಲೀಟರ್‍ಗೆ 13 ರೂ ಹೆಚ್ಚಿಸೋದರ ಮೂಲಕ ಗ್ರಾಹಕರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ.
ಇನ್ನು ಲಾಕ್‍ಡೌನ್ ಹಿನ್ನಲೆ ಲಕ್ಷಾಂತರ ಜನರು ತಮ್ಮ ಕೆಲಸವನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ.ಮಾತ್ರವಲ್ಲ ಅಂತರಾಷ್ಟ್ರಿಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಸಂಪೂರ್ಣ ಕುಸಿದಿದೆ. ಇದರ ನಡುವೆ ಕೇಂದ್ರ ಸರ್ಕಾರದ ಈ ನಡೆ ಜನರ ಕೆಂಗಣ್ಣಿಗೆ ಗುರಿಯಾಗೋದರಲ್ಲಿ ಯಾವುದೇ ಅನುಮಾನವಿಲ್ಲ.