ತಾಯಿಯಾದಾಕೆ ವೃತ್ತಿ ಜೀವನವನ್ನು ಸಮತೋಲನ ಮಾಡುವ ವೇಳೆ ತಾಯ್ತನದ ಜವಾಬ್ದಾರಿಯನ್ನೇ ಮರೆಯುವ ಕಾಲವಿದು.. ಆದರೆ ಇಲ್ಲೊಬ್ಬ ತಾಯಿ ಆಟದ ನಡುವೆ ಸಿಕ್ಕ ಬಿಡುವಿನ ವೇಳೆ ಓಡಿ ಹೋಗಿ ಹಸಿದ ತನ್ನ ಕಂದನಿಗೆ ಹಾಲುಣಿಸುತ್ತಿರುವ ಫೋಟೋ ವೈರಲ್ ಆಗಿದೆ.
ಮಿಜುರಾಂನ ರಾಜ್ಯ ಮಟ್ಟದ ಆಟ
2019ರಲ್ಲಿ ಟುಯ್ಕುಂ ವಾಲಿಬಾಲ್ ಟೀಂನ ಆಟಗಾರ್ತಿ ಲಾಲ್ ವೆಂಟ್ ಲ್ಯುವಾಂಗಿ, ಆಟದ ನಡುವೆ ಓಡಿ ಹೋಗಿ ತನ್ನ 7 ತಿಂಗಳ ಮಗುವಿಗೆ ಹಾಲುಣಿಸುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ ಭಾರೀ ಸುದ್ದಿಯಾಗಿದೆ. ಎಲ್ಲರೂ ಆ ತಾಯಿ ಕರುಳಿತ ತುಡಿತ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ಸಾವಿರಾರು ಜನ ಸೇರಿರುವ ಗ್ರೌಂಡ್ ಅದಾದ್ದರೂ ಅವೆನ್ನೆಲ್ಲಾ ಲೆಕ್ಕಿಸದೆ ತನ್ನ ತಾಯ್ತನದ ಜವಾಬ್ದಾರಿ ಮೆರೆದ ಆಟಗಾರ್ತಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತದೆ. ಮಿಜುರಾಂ ಸರ್ಕಾರ ಇತರ ತಾಯಿಂದಿರಿಗೆ ಸ್ಪೂರ್ತಿ ತುಂಬುವಂತೆ ಆಕೆ ನಡೆದು ಕೊಂಡಿರುವುದಕ್ಕೆ ರೂ. 10,000 ಬಹುಮಾನ ಘೋಷಿಸಿದೆ.