ನವದೆಹಲಿ, ನ. 20: ವಿಶ್ವಾದ್ಯಂತ ಚುಚ್ಚುಮದ್ದು ರೂಪದ ಗರ್ಭನಿರೋಧಕವನ್ನು ಪುರುಷರಿಗೆ ಸಂಶೋಧನೆ ಮಾಡುವ ಪ್ರಯತ್ನಗಳು ನಡೆಯುತ್ತಲೇ ಇದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ವಿಜ್ಞಾನಿಗಳು ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಸಂತಾನಹರಣ ಶಸ್ತ್ರಚಿಕಿತ್ಸೆ (ವ್ಯಾಸೆಕ್ಟಮಿ)ಗೆ ಹಿಂದೇಟು ಹಾಕುವ ಪುರುಷರಿಗಾಗಿ ವಿಶ್ವದಲ್ಲೇ ಮೊದಲ ಬಾರಿಗೆ ಗರ್ಭ ನಿರೋಧಕ ಚುಚ್ಚುಮದ್ದನ್ನು ಸಂಶೋಧಿಸಿ,ಯಶಸ್ವಿಯಾಗಿ ಕ್ಲಿನಿಕಲ್ ಪರೀಕ್ಷೆಗೆ ಒಳಪಡಿಸಿದ್ದಾರೆ. ಇದರ ಉತ್ಪಾದನೆಗೆ ಅನುಮತಿ ನೀಡುವಂತೆ ಕೋರಿ ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ (ಡಿಸಿಜಿಐ)ಕ್ಕೆ ರವಾನಿಸಿದ್ದಾರೆ….
ನೋಂದಾಯಿತ ವೈದ್ಯರೇ ಈ ಚುಚ್ಚುಮದ್ದು ನೀಡಬಬೇಕಾಗಿದ್ದು, ಅರಿವಳಿಕೆ ನೀಡಿದ ಬಳಿಕ ಈ ಚುಚ್ಚುಮದ್ದನ್ನು ವೃಷಣದ ಬಳಿ ವೀರಾರಯಣು ಹೊಂದಿದ ಕೊಳವೆಗೆ ಚುಚ್ಚ ಬೇಕಾಗುತ್ತದೆ. ಒಮ್ಮೆ ಈ ಇಂಜೆಕ್ಷನ್ ತೆಗೆದುಕೊಂಡರೆ, ಅದು 13 ವರ್ಷಗಳ ಕಾಲ ಪರಿಣಾಮ ಹೊಂದಿರುತ್ತದ. ಹೀಗಾಗಿ ಲೈಂಗಿಕ ಕ್ರಿಯೆ ನಡೆಸಿದರೂ ಸಂತೋನೋತ್ಪತ್ತಿಯಾಗುವುದಿಲ್ಲ ಎಂದು ಐಸಿಎಂಆರ್‌ನಲ್ಲಿ ಹಿರಿಯ ವಿಜ್ಞಾನಿಗಳು ತಿಳಿಸಿದ್ದಾರೆ….
ಪುರುಷರಿಗಾಗಿ ಸಂಶೋಧಿಸಿರುವ ಗರ್ಭನಿರೋಧಕ ಚುಚ್ಚುಮದ್ದು ಎಲ್ಲ ಅನುಮತಿಯನ್ನು ಪಡೆದು ಉತ್ಪಾದನೆ ಆರಂಭವಾಗುವಂತಾಗಲು ಆರರಿಂದ ಏಳು ತಿಂಗಳು ಸಮಯಾವಕಾಶ ಬೇಕಾಗುತ್ತದೆ. ಡಿಸಿಜಿಐ ಇದಕ್ಕೆ ಅನುಮತಿ ಕೊಡಬೇಕು. ಅದಕ್ಕೂ ಮುನ್ನ ಆ ಸಂಸ್ಥೆ ತಾನೇ ಪರೀಕ್ಷೆ ಮಾಡುತ್ತದೆ….