ಕೊಚ್ಚಿ,ಸೆ.12: ವಿಮಾನ ಹಾರಾಡಲು ಇಂಧನ ಹಾಕಲು ದುಡ್ಡಿಲ್ಲದೆಯೇ 4 ಗಂಟೆಗಳ ಕಾಲ ಹಾರಾಟ ತಡವಾದ ಘಟನೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಇಂತಹ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತರುವುದು ಭಾರತದ ಹೆಮ್ಮೆಯ ಏರ್ ಇಂಡಿಯಾ ಸಂಸ್ಥೆ.. ಇಂಧನ ಹಾಕಲು ದುಡ್ಡಿಲ್ಲದೆ ಏರ್ ಇಂಡಿಯಾ ಕೊಚ್ಚಿ-ದುಬೈ ವಿಮಾನ ಡ್ರೀಮ್ ಲೈನರ್ ಎ ಐ 1933, 4 ಗಂಟೆಗಳ ಕಾಲ ವಿಳಂಬ ಮಾಡಿತ್ತು. 300 ಪ್ರಯಾಣಿಕರನ್ನು ಹೊಂದಿದ್ದ ವಿಮಾನ ಬೆಳಗ್ಗೆ 9.15ಕ್ಕೆ ಕೊಚ್ಚಿಯಿಂದ ಹೊರಡಬೇಕಾಗಿತ್ತು. ಆದರೆ ಹೊರಟಿದ್ದು ಮಾತ್ರ ಮಧ್ಯಾಹ್ನ 1.15ಕ್ಕೆ..
ಎಂಪಿ ಆಂಟೊ ಆಂಟೊನಿ, ಪೆಟ್ರೋಲಿಯಂ ಮಂತ್ರಿ ಧರ್ಮೇಂದ್ರ ಪ್ರಧಾನ್ ಜೊತೆ ಮಾತನಾಡಿ ಮಧ್ಯಸ್ಥಿಕೆ ವಹಿಸಿ, ಇಂಧನ ಕಂಪನಿಗಳ ಜೊತೆಗೆ ಮಾತುಕತೆ ನಡೆಸಿದ ನಂತರವಷ್ಟೇ ಅವಶ್ಯಕ ಇಂಧನ ಲಭ್ಯವಾಯ್ತು. ಕೊಚ್ಚಿ ಮಾತ್ರವಲ್ಲದೆ ಮುಂಬೈ ಹಾಗೂ ದೆಹಲಿಯಿಂದ ಹೊರಡುವ ಏರ್ ಇಂಡಿಯಾ ವಿಮಾನಗಳೂ ಇದೇ ಸಮಸ್ಯೆ ಕಾಡುತ್ತಿದ್ದು, ತಡವಾಗಿ ಹೊರಡುವುದು ಇಲ್ಲವೇ ವಿಮಾನ ಹಾರಾಟ ಸ್ಥಗಿತವಾಗುತ್ತಿವೆ.