ಹೈದರಾಬಾದ್: ನಿರ್ದೇಶಕ ಮುರಳಿ ಕಾಂತ್ ದೇವಸೋತ್ ಅವರ ‘ಅಲಿಯಾಸ್ ರುಕ್ಮಿಣಿ’ ಚಿತ್ರದಲ್ಲಿ ನಟ ನಿತಿನ್ ಯುವ ಕೃಷ್ಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಹೊಸ ಲುಕ್ ಒಳಗೊಂಡ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
‘ಪ್ರತಿಯೊಂದು ಪ್ರೇಮಕಥೆಗೂ ಒಂದು ಆರಂಭವಿರುತ್ತದೆ’ ಎಂಬ ಸಂದೇಶದೊಂದಿಗೆ ನಿತಿನ್ ವಿಡಿಯೋ ಹಂಚಿಕೊಂಡಿದ್ದಾರೆ. ರುಕ್ಮಿಣಿಯ ಜೀವನಕ್ಕೆ ಪ್ರವೇಶಿಸುವುದಕ್ಕೂ ಮುನ್ನ ಕೃಷ್ಣನ ಬದುಕನ್ನು ಚಿತ್ರದಲ್ಲಿ ತೋರಿಸಲಾಗಿದೆ. ಆಫಿಯಾ ಸಯ್ಯದ್ ರುಕ್ಮಿಣಿ ಪಾತ್ರ ನಿರ್ವಹಿಸಿದ್ದಾರೆ.

ಸಾಯಿ ಕುಮಾರ್ ಮತ್ತು ಹರ್ಷವರ್ಧನ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ನಾನಿ ಚಿತ್ರದ ಪ್ರೆಸೆಂಟರ್ ಆಗಿದ್ದು, ದೀಪ್ತಿ ಗಂಟಾ ನಿರ್ಮಾಪಕಿ. ವಿಜಯ್ ಬುಲ್ಗಾನಿನ್ ಸಂಗೀತ ಸಂಯೋಜಿಸಿದ್ದಾರೆ. ಡಿಸೆಂಬರ್ 4ರಂದು ಸಿನಿಮಾ ವಿಶ್ವದಾದ್ಯಂತ ತೆರೆಕಾಣಲಿದೆ.















































































