ಚಿಕ್ಕಮಗಳೂರು: ದೇಶಾಭಿಮಾನ, ಆತ್ಮಾಭಿಮಾನ ಹಾಗೂ ಬಿಜೆಪಿಯ ಸಿದ್ಧಾಂತ ಮತ್ತು ರಾಷ್ಟ್ರೀಯ ವಿಚಾರಧಾರೆಗಳನ್ನು ಮೆಚ್ಚಿ ಕಳಸಾಪುರದ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು.
ಡಾ. ರವಿ ಸಿ.ಟಿ. ಅವರ ನಿವಾಸದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿರಣ್, ದೇವರಾಜ್ ಮತ್ತು ಯತೀಶ್ ಅವರ ನೇತೃತ್ವದಲ್ಲಿ ಪವನ್, ಚಂದನ್, ಉಮೇಶ್ ಕೆ.ಎಂ., ಜೀವನ್, ಸುನಿಲ್, ಪ್ರೀತಮ್ ಸೇರಿದಂತೆ ಹತ್ತಕ್ಕೂ ಹೆಚ್ಚು ಯುವಕರು ಬಿಜೆಪಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಡಾ. ರವಿ ಸಿ.ಟಿ. ಅವರು ಪಕ್ಷದ ಬಾವುಟ ನೀಡಿ ನೂತನ ಕಾರ್ಯಕರ್ತರನ್ನು ಬರಮಾಡಿಕೊಂಡರು.

ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ, ಭ್ರಷ್ಟಾಚಾರ ಹಾಗೂ ರಾಷ್ಟ್ರೀಯ ವಿಚಾರಗಳಿಗೆ ಸಂಬಂಧಿಸಿದ ಪಕ್ಷದ ನಿಲುವುಗಳಿಂದ ಬೇಸತ್ತು ಬಿಜೆಪಿ ಸೇರುತ್ತಿರುವುದಾಗಿ ಯುವಕರು ತಿಳಿಸಿದರು. ಬಿಜೆಪಿಯ ಸಿದ್ಧಾಂತ ಮತ್ತು ದೇಶದ ಹಿತಾಸಕ್ತಿಗೆ ಆದ್ಯತೆ ನೀಡುವ ಪಕ್ಷದ ಕಾರ್ಯವೈಖರಿ ತಮ್ಮನ್ನು ಆಕರ್ಷಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ರವಿ ಸಿ.ಟಿ., ಯುವಕರು ದೇಶದ ಭವಿಷ್ಯದ ಶಕ್ತಿಯಾಗಿದ್ದಾರೆ. ರಾಷ್ಟ್ರದ ಅಭಿವೃದ್ಧಿ, ಸಂಸ್ಕೃತಿ ಮತ್ತು ರಾಷ್ಟ್ರೀಯ ವಿಚಾರಧಾರೆಗಳ ಬಗ್ಗೆ ಬದ್ಧತೆ ಹೊಂದಿರುವ ಯುವಕರನ್ನು ಪಕ್ಷಕ್ಕೆ ಸದಾ ಸ್ವಾಗತಿಸಲಾಗುವುದು ಎಂದು ತಿಳಿಸಿದರು.















































































