ಪಾಟ್ನಾ: ಬಿಹಾರದ ಮಧುಬನಿ ರೈಲು ನಿಲ್ದಾಣದಲ್ಲಿ ಗುರುವಾರ ಜಯನಗರ-ಉಧ್ನಾ ಎಕ್ಸ್‌ಪ್ರೆಸ್ ರೈಲಿನ ಜನರಲ್ ಬೋಗಿಗೆ ಬೆಂಕಿ ಕಾಣಿಸಿಕೊಂಡು ಬೋಗಿ ಸಂಪೂರ್ಣ ಸುಟ್ಟುಹೋಗಿದೆ.
ನಿರ್ವಹಣಾ ಕಾರ್ಯಕ್ಕಾಗಿ ಪ್ಲಾಟ್‌ಫಾರ್ಮ್ ಸಂಖ್ಯೆ 3ರಲ್ಲಿ ನಿಲ್ಲಿಸಲಾಗಿದ್ದ ಬೋಗಿಯಿಂದ ಏಕಾಏಕಿ ದಟ್ಟ ಹೊಗೆ ಮತ್ತು ಜ್ವಾಲೆಗಳು ಕಾಣಿಸಿಕೊಂಡವು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ವೇಗವಾಗಿ ಹರಡಿ ಸಂಪೂರ್ಣ ಬೋಗಿಯನ್ನು ಆವರಿಸಿತು.
#WATCH | Fire broke out in the empty coaches of the Jaynagar–Udhna Antyodaya Express at the Madhubani Railway Station in Bihar. The train was stationary on Platform No. 3 at Madhubani Station, undergoing shunting operations, when the incident occurred. pic.twitter.com/eli4tYMmhF
— ANI (@ANI) May 28, 2026
ಘಟನೆಯ ವೇಳೆ ರೈಲಿನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ರೈಲು ಕಳೆದ ಎರಡು ದಿನಗಳಿಂದ ನಿರ್ವಹಣೆಗೆ ನಿಲ್ದಾಣದಲ್ಲೇ ನಿಂತಿತ್ತು ಎಂದು ತಿಳಿದುಬಂದಿದೆ.
ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
























































