ಮಂಡ್ಯ: ಜಿಲ್ಲೆಯ ಮದ್ದೂರು ಸಮೀಪದ ಕಾರಕಹಳ್ಳಿಯಲ್ಲಿ ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಫೆಬ್ರವರಿ 27ರಿಂದ ಮಾರ್ಚ್ 6ರವರೆಗೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿದ್ದು, ಊರಿನಲ್ಲಿ ಉತ್ಸವದ ಸಂಭ್ರಮ ಮನೆಮಾಡಿದೆ.

ಈ ಬಾರಿಯೂ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಪೌರಾಣಿಕ ಸನ್ನಿವೇಶವನ್ನು ನೆನಪಿಸುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನದ ಪ್ರಮುಖರು ತಿಳಿಸಿದ್ದಾರೆ.
ಕಾರ್ಯಕ್ರಮಗಳ ವಿವರ:
- ಫೆ.27 (ಶುಕ್ರವಾರ): ಸಂಜೆ 5ಕ್ಕೆ ಆಲಭುಜನಹಳ್ಳಿಗೆ ಅಕ್ಕಿ ಪಡಿಗೆ ಕಾರ್ಯಕ್ರಮ.
- ಫೆ.28 (ಶನಿವಾರ): ಪಟ್ಟಲದಮ್ಮ ದೇವರ ಕೊಂಡೋತ್ಸವ.
- ಮಾ.1 (ಭಾನುವಾರ): ಮನೆದೇವರ ದೇವಸ್ಥಾನಗಳಲ್ಲಿ ಹೋಮ ಹಾಗೂ ಹೊಸ ಮಡಿಕೆ ಕಾರ್ಯಕ್ರಮ.
- ಮಾ.2 (ಸೋಮವಾರ): ಸಂಜೆ ಬಂಡಿಉತ್ಸವ, ರಾತ್ರಿ ಅಗ್ನಿಕೊಂಡ, ಕರಗ ಬಾಯಿ ಬೀಗ. ಇದೇ ದಿನ ಚಿಕ್ಕರಸಿನಕೆರೆ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಸ್ಥಾನ, ತೊರೆಬೊಮ್ಮನಹಳ್ಳಿ ಪಟ್ಟಲದಮ್ಮ ದೇವರು ಹಾಗೂ ಕಾರಕಹಳ್ಳಿ ಶ್ರೀ ಬಸವೇಶ್ವರಸ್ವಾಮಿ ದೇವರ ಉತ್ಸವ.

- ಮಾ.3 (ಮಂಗಳವಾರ): ಬೆಳಿಗ್ಗೆ 11ಕ್ಕೆ ಅನ್ನಸಂತರ್ಪಣೆ ಹಾಗೂ ಪೂಜಾ ಕಾರ್ಯಕ್ರಮ.
- ಮಾ.4 (ಬುಧವಾರ): ಸಂಜೆ 4ಕ್ಕೆ ರಥೋತ್ಸವ.
- ಮಾ.5 (ಗುರುವಾರ): ದೇವೇಗೌಡನದೊಡ್ಡಿ ಗ್ರಾಮದಲ್ಲಿ ಉತ್ಸವ.
- ಮಾ.6 (ಶುಕ್ರವಾರ): ಶ್ರೀ ಮುತ್ತುರಾಯಸ್ವಾಮಿ ಸೇವೆ ಹಾಗೂ ಅನ್ನಸಂತರ್ಪಣೆ.
ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಹಾಗಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.



















































