ಬೆಂಗಳೂರು: ರಂಜಾನ್ ಸಮಯದಲ್ಲಿ ತರಗತಿಯ ವೇಳಾಪಟ್ಟಿ ಹಾಗೂ ಶಾಲಾ ಸಮಯವನ್ನು ಬದಲಾವಣೆ ಮಾಡುವ ಸರ್ಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಂಜಾನ್ ಸಮಯದಲ್ಲಿ ತರಗತಿಯ ವೇಳಾಪಟ್ಟಿ ಹಾಗೂ ಶಾಲಾ ಸಮಯವನ್ನು ಬದಲಾವಣೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಹಿಂದೂಗಳು ಶ್ರದ್ಧಾಭಕ್ತಿಯಿಂದ ಆಚರಿಸುವ ದೀಪಾವಳಿ, ನಾಗರಪಂಚಮಿ, ಹೋಳಿ ಹುಣ್ಣಿಮೆ, ರಾಮನವಮಿ, ಹನುಮ ಜಯಂತಿಗೆ ರಜೆ ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ.
‘ನಾಡಿನ ನಾಡಿನ ಪ್ರಮುಖ ಸಾಂಸ್ಕೃತಿಕ ಆಚರಣೆಗಳಾದ ಗವಿ ಸಿದ್ದೇಶ್ವರ ಜಾತ್ರೆ ಸೇರಿದಂತೆ ಆಯಾ ಭಾಗದ/ಜಿಲ್ಲೆಗಳ ಪ್ರಮುಖ ಹಿಂದೂ ಹಬ್ಬಗಳಿಗೆ, ರಜೆ ಘೋಷಿಸಿ ಎಲ್ಲರಿಗೂ ಒಂದೇ ರೀತಿಯಾದ ನ್ಯಾಯ ಎಂದು ತೋರಿಸಲಿ’ ಎಂದು ಯತ್ನಾಳ್ ಸಲಹೆ ನೀಡಿದ್ದಾರೆ.


























































