ಒಂದಿಲ್ಲೊಂದು ವಿವಾದದಲ್ಲಿ ಸಿಲುಕುತ್ತಿರುವ ಸಿಎಂ ಪುತ್ರ ಯತೀಂದ್ರರ ಹೆಸರನ್ನು ಇದೀಗ ಮಹಿಳಾ ಸರ್ಕಾರಿ ನೌಕರರ ಆತ್ಮಹತ್ಯೆ ಪ್ರಕರಣದಲ್ಲೂ ಬಿಜೆಪಿ ಎಳೆದು ತಂದಿದೆ.
ಬೆಂಗಳೂರು: ವರ್ಗಾವಣೆ ಕಿರುಕುಳಕ್ಕೆ ಬೇಸತ್ತು ವರುಣಾದಲ್ಲಿ ಮಹಿಳಾ ಅಧಿಕಾರಿ ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣದಲ್ಲಿ ಸಿಎಂ ಪುತ್ರ ಯತೀಂದ್ರ ಅವರ ಕೈವಾಡವಿರುವ ಬಗ್ಗೆ ಪ್ರತಿಪಕ್ಷ ಬಿಜೆಪಿ ಸಂಶಯ ವ್ಯಕ್ತಪಡಿಸಿದೆ.
ಸಿದ್ದರಾಮಯ್ಯ ಸರ್ಕಾರ, ಸರ್ಕಾರಿ ನೌಕರರಿಗೆ ಆತ್ಮಹತ್ಯೆ ಗ್ಯಾರಂಟಿ ಜಾರಿಗೊಳಿಸಿದೆ. ಸಿಎಂ ತವರು ಕ್ಷೇತ್ರದಲ್ಲೇ ಮಹಿಳಾ ಅಧಿಕಾರಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಆಘಾತಕಾರಿಯಾಗಿದೆ.
ಭ್ರಷ್ಟ ಸರ್ಕಾರದ ದುರಾಡಳಿತದಿಂದಾಗಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ವರ್ಗಾವಣೆ ದಂಧೆಯ ಕಿಂಗ್ ಪಿನ್ ಯಾರು ಎಂಬುದು… pic.twitter.com/nF1izT5uNE
— BJP Karnataka (@BJP4Karnataka) November 22, 2025
ಸಿಎಂ ಸ್ವಕ್ಷೇತ್ರದಲ್ಲೇ ಅಧಿಕಾರಿಗಳಿಗೆ ಇಷ್ಟು ಕಿರುಕುಳ ಇರುವಾಗ ಉಳಿದಕಡೆ ಏನು ಕಥೆ ಎಂದು ಬಿಜೆಪಿ ಪ್ರಶ್ನಿಸಿದೆ.
ವರ್ಗಾವಣೆ ಕಿರುಕುಳಕ್ಕೆ ಬೇಸತ್ತು ಸಿಎಂ @siddaramaiah ಸ್ವಕ್ಷೇತ್ರ ವರುಣಾದಲ್ಲೇ ಮಹಿಳಾ ಅಧಿಕಾರಿ ಸರ್ಕಾರಿ ಕಛೇರಿಯೊಳಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ
ಈ ಕಿರುಕುಳದ ಹಿಂದೆ ವರ್ಗಾವಣೆ ಕಿಂಗ್ ಪಿನ್ ವರುಣಾ ಉಸ್ತುವಾರಿ ಯತೀಂದ್ರ ಸಿದ್ದರಾಮಯ್ಯನವರ ಕೈವಾಡ ಶಂಕೆ ಮೂಡುತ್ತಿದೆ.
ಸಿಎಂ ಸ್ವಕ್ಷೇತ್ರದಲ್ಲೇ ಅಧಿಕಾರಿಗಳಿಗೆ ಇಷ್ಟು ಕಿರುಕುಳ… pic.twitter.com/HPsBKWbvFG
— BJP Karnataka (@BJP4Karnataka) November 22, 2025
ಸಾಮಾಜಿಕ ಮಾಧ್ಯಮ ‘X’ ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ವರ್ಗಾವಣೆ ಕಿರುಕುಳಕ್ಕೆ ಬೇಸತ್ತು ಸಿಎಂ ಸಿದ್ದರಾಮಯ್ಯರ ಸ್ವಕ್ಷೇತ್ರ ವರುಣಾದಲ್ಲೇ ಮಹಿಳಾ ಅಧಿಕಾರಿ ಸರ್ಕಾರಿ ಕಛೇರಿಯೊಳಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಕಿರುಕುಳದ ಹಿಂದೆ ವರ್ಗಾವಣೆ ಕಿಂಗ್ ಪಿನ್ ವರುಣಾ ಉಸ್ತುವಾರಿ ಯತೀಂದ್ರ ಸಿದ್ದರಾಮಯ್ಯನವರ ಕೈವಾಡ ಶಂಕೆ ಮೂಡುತ್ತಿದೆ ಎಂದು ಬರೆದುಕೊಂಡಿದೆ. ಸಿಎಂ ಸ್ವಕ್ಷೇತ್ರದಲ್ಲೇ ಅಧಿಕಾರಿಗಳಿಗೆ ಇಷ್ಟು ಕಿರುಕುಳ ಇರುವಾಗ ಉಳಿದಕಡೆ ಏನು ಕಥೆ? ಎಂದು ಪ್ರಶ್ನಿಸಿರುವ ವೈಖರಿ ಕೂಡಾ ಗಮನಸೆಳೆದಿದೆ.
ಸಿದ್ದರಾಮಯ್ಯ ಸರ್ಕಾರ, ಸರ್ಕಾರಿ ನೌಕರರಿಗೆ ಆತ್ಮಹತ್ಯೆ ಗ್ಯಾರಂಟಿ ಜಾರಿಗೊಳಿಸಿದೆ. ಸಿಎಂ ತವರು ಕ್ಷೇತ್ರದಲ್ಲೇ ಮಹಿಳಾ ಅಧಿಕಾರಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಆಘಾತಕಾರಿಯಾಗಿದೆ ಎಂದೂ ಬಿಜೆಪಿ ಹೇಳಿದೆ.
ಭ್ರಷ್ಟ ಸರ್ಕಾರದ ದುರಾಡಳಿತದಿಂದಾಗಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ವರ್ಗಾವಣೆ ದಂಧೆಯ ಕಿಂಗ್ ಪಿನ್ ಯಾರು ಎಂಬುದು ಬಯಲಾಗಲಿ ಎಂದು ಪ್ರತಿಪಾದಿಸಿದೆ.




















































