ಬೆಂಗಳೂರು: ಆನೇಕಲ್ ಪಟ್ಟಣದ ಅಲಯನ್ಸ್ ವಿಶ್ವ ವಿದ್ಯಾಲಯದಲ್ಲಿ ಶಾಲಾ ನಾಯಕತ್ವ ಕುರಿತಂತೆ ಅಂತರ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ನಡೆಯಿತು.
ಮೈಸೂರು ಸಂಸದ ಯದುವೀರ್ ಒಡೆಯರ್ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿ ಭವಿಷ್ಯದ ನಾಯಕತ್ವ ಬೆಳವಣಿಗೆ ಕುರಿತಂತೆ ಹಲವು ಮಾಹಿತಿಗಳನ್ನ ಹಂಚಿಕೊಂಡರು. ಭಾರತ ಹಾಗೂ ವಿದೇಶಗಳಿಂದ 150ಕ್ಕೂ ಹೆಚ್ಚು ಪ್ರತಿನಿಧಿಗಳು ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದರು.

ಈ ವೇಳೆ ಮಾತನಾಡಿದ ಯದುವೀರ್ ಒಡೆಯರ್ ಶಿಕ್ಷಣ ಕ್ಷೇತ್ರದ ತಜ್ಞರ ಜೊತೆ ಭವಿಷ್ಯದ ನಾಯಕತ್ವ ಬೆಳವಣಿಗೆ ಕುರಿತಂತೆ ಚರ್ಚೆ ನಡೆಸಿದ್ದು ಉತ್ತಮ ಬೆಳವಣಿಗೆಯಾಗಿದೆ. ಕೇಂದ್ರ ಸರ್ಕಾರ ಖೆಲೋ ಇಂಡಿಯಾ ಮೂಲಕ ವಿದ್ಯಾರ್ಥಿಗಳಿಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಉತ್ತೇಜನ ನೀಡುತ್ತಿದೆ ಎಂದರು.
ಇತ್ತಿಚಿನ ಮುಂಗಾರು ಅಧಿವೇಶನದಲ್ಲಿ ಕ್ರೀಡಾ ಮಸೂದೆ ಅನುಷ್ಟಾನ ಮಾಡುವ ಮೂಲಕ ಕ್ರೀಡಾಪಟುಗಳ ಭವಿಷ್ಯ ರೂಪಿಸುವಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ. ಅದೇ ರೀತಿ ಈ ವಿಚಾರ ಸಂಕಿರಣವೂ ಭವಿಷ್ಯ ಭಾರತದ ವಿದ್ಯಾರ್ಥಿಗಳ ನಾಯಕತ್ವ ಬೆಳವಣಿಗೆಯ ವಿಚಾರದಲ್ಲಿ ಮಹತ್ವವಾದ ಪಾತ್ರವಹಿಸಲಿದೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದರು.




























































