ವಯಸ್ಸಾಗುವುದು ಸಹಜ, ಆದರೆ ಅದರ ಲಕ್ಷಣಗಳನ್ನು ತಡೆದು ಚರ್ಮದ ತಾಜಾತನವನ್ನು ಕಾಪಾಡಿಕೊಳ್ಳುವುದು ಸಾಧ್ಯ. ಅದರಲ್ಲೂ ಕಿವಿ ಹಣ್ಣು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಸ್ವಲ್ಪ ಹುಳಿ ರುಚಿಯಿದ್ದರೂ, ಕಿವಿ ಹಣ್ಣಿನಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ಅಪಾರ ಪ್ರಯೋಜನ ನೀಡುತ್ತವೆ. ತಜ್ಞರ ಪ್ರಕಾರ, ಪ್ರತಿದಿನ ಒಂದು ಕಿವಿ ಹಣ್ಣು ತಿನ್ನುವುದರಿಂದ:
- ಹಲವಾರು ಕಾಯಿಲೆಗಳಿಂದ ರಕ್ಷಣೆ
- ವಯಸ್ಸಾಗುವ ಲಕ್ಷಣಗಳ ತಡೆ
- ನಿದ್ರೆಯ ಗುಣಮಟ್ಟ ಸುಧಾರಣೆ
- ನಿದ್ರಾಹೀನತೆಗೆ ಪರಿಹಾರ:
ಕಿವಿ ಹಣ್ಣಿನಲ್ಲಿ ಇರುವ ಸೆರೋಟೋನಿನ್ ದೇಹವನ್ನು ಆರಾಮಗೊಳಿಸಿ, ಮಲಗುವ ಮುನ್ನ ತಿನ್ನುವುದರಿಂದ ಉತ್ತಮ ನಿದ್ರೆ ಬರುತ್ತದೆ. ಉತ್ತಮ ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಸಹಾಯಕ.
ಚರ್ಮದ ಯೌವನಕ್ಕೆ ಕಿವಿ:
ಕಿವಿ ಹಣ್ಣಿನಲ್ಲಿ ವಿಟಮಿನ್ C ಮತ್ತು ವಿಟಮಿನ್ E ಎಂಬ ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳು ಇವೆ. ಇವು ಚರ್ಮದಲ್ಲಿನ ಸುಕ್ಕುಗಳನ್ನು ಕಡಿಮೆ ಮಾಡಿ, ಚರ್ಮದ ಸ್ಥಿರತೆಯನ್ನು ಕಾಪಾಡುತ್ತವೆ. ನಿಯಮಿತ ಸೇವನೆಯಿಂದ ವಯಸ್ಸಾದ ಲಕ್ಷಣಗಳು ಕಡಿಮೆಯಾಗಬಹುದು.
ಕಣ್ಣುಗಳಿಗೆ ಸಹ ಲಾಭ:
ಇದಲ್ಲಿರುವ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಕಣ್ಣಿನ ಆರೋಗ್ಯಕ್ಕೆ ಸಹಕಾರಿ. ಇವು ಕಣ್ಣಿನ ಹೊಳಪು ಹೆಚ್ಚಿಸಿ, ವಯಸ್ಸಿನ ಸಂಬಂಧಿತ ಕಣ್ಣಿನ ಸಮಸ್ಯೆಗಳಿಂದ ರಕ್ಷಿಸುತ್ತವೆ.
ದಿನಕ್ಕೆ ಒಂದು ಕಿವಿ ಹಣ್ಣು ನಿಮ್ಮ ಆಹಾರದಲ್ಲಿ ಸೇರಿಸಿ್ದರೆ ಆರೋಗ್ಯ, ಚರ್ಮ ಮತ್ತು ಕಣ್ಣುಗಳ ರಕ್ಷಣೆಗೆ ಪ್ರಯೋಜನಕಾರಿ ಎಂದು ತಜ್ಞರು ಸಲಹೆ ನೀಡಿದ್ದಾರೆ.