ಬೆಂಗಳೂರು: KSRTC ಬಸ್ಸುಗಳಲ್ಲಿ ಸರಳ ಹಾಗೂ ಸುಲಭ ವ್ಯವಹಾರಣೆ ಸಂಬಂಧ ಜಾರಿಯಲ್ಲಿದ್ದ ಪ್ರಯಾಣ ದರ ‘ರೌಂಡಪ್ ವ್ಯವಸ್ಥೆ’ಯಲ್ಲಿ ಬದಲಾವಣೆ ತರಲು ನಿಗಮ ಮುಂದಾಗಿದೆ. ನಿಗಮದಲ್ಲಿ UPI ಯಶಸ್ವಿ ಅನುಷ್ಠಾನ ಆಗಿರುವುದರಿಂದ ರೌಡಂಪ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ‘ರೌಂಡಪ್ ವ್ಯವಸ್ಥೆ’?
‘ರೌಂಡಪ್ ವ್ಯವಸ್ಥೆ’ಯು KSRTC ನಿಗಮಗಳ ಪ್ರತಿಷ್ಟಿತ ಸಾರಿಗೆಗಳಲ್ಲಿ (Premium Service buses 400 ಬಸ್ಸುಗಳಲ್ಲಿ) ಜಾರಿಯಲ್ಲಿದ್ದು, ಅದರಲ್ಲೂ ETM ಮತ್ತು ಅವತಾರ್ ಕೌಂಟರ್ ಗಳಲ್ಲಿ ಪಡೆಯುವ ಟಿಕೇಟ್ ಗೆ ಮಾತ್ರ ಈ ವ್ಯವಸ್ಥೆ ಇತ್ತು. ಉದಾಹರಣೆಗೆ, ಪ್ರಯಾಣ ದರ ರೂ.101 ರಿಂದ 105 ರವರೆಗೂ ಇದ್ದಲ್ಲಿ ರೂ.100 ಪ್ರಯಾಣಿಕರಿಂದ ಪಡೆಯಲಾಗುತ್ತದೆ. ಅದೇ ರೀತಿ ರೂ.106 ರಿಂದ ರೂ.109 ಇದ್ದಲ್ಲಿ ಪ್ರಯಾಣಿಕರಿಂದ ರೂ.110 ಪಡೆಯಲಾಗುತ್ತಿತ್ತು.
ಇದೀಗ ನಿಗಮದಲ್ಲಿ UPI ಯಶಸ್ವಿ ಅನುಷ್ಟಾನ ಆಗಿರುವುದರಿಂದ ‘ರೌಡಂಪ್ ವ್ಯವಸ್ಥೆ’ಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. ತಂತ್ರಾಂಶದಲ್ಲಿ ಈ ಸಂಬಂಧ ಬದಲಾವಣೆ ಮಾಡುವ ಕ್ರಮ ಪ್ರಗತಿಯಲ್ಲಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.




























































