ಕತಾರ್: ಭಾರತೀಯ ದೂತವಾಸದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರ ನೇತೃತ್ವದಲ್ಲಿ ನಡೆದ ಆಯುರ್ವೇದ ದಿನಾಚರಣೆ ಗಮನಸೆಳೆಯಿತು.
ಭಾರತೀಯ ದೂತವಾಸದ ಉಪಮುಖ್ಯಸ್ಥ ಸಂದೀಪ್ ಕುಮಾರ್ ಈ ಕಾರ್ಯಕ್ರಮದಲ್ಲಿ. ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಪ್ರಮುಖ ಭಾಷಣಕಾರರಾಗಿ ಡಾಕ್ಟರ್ ಫಸಿಹ ಅಷ್ಕರ್ ಅವರು “ಆಯುರ್ವೇದ ಹಾಗು ಪ್ರಪಂಚದ ಆರೋಗ್ಯ” ಎಂಬ ವಿಷಯವನ್ನು ಕುರಿತು ಮಾತನಾಡಿದರು.
ಐಸಿಸಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಆಯುರ್ವೇದ ಚಿಕಿತ್ಸಾ ಪದ್ದತಿಯ ಮಹತ್ವ ಬಗ್ಗೆ ಗಮನಸೆಳೆದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವ ಅಗತ್ಯದ ಬಗ್ಗೆ ಪ್ರತಿಪಾದಿಸಿದರು.
ಮುಖ್ಯ ಅತಿಥಿಗಳಾದ ಸಂದೀಪ್ ಕುಮಾರ್ ಮಾತನಾಡಿ,, ಆಯುರ್ವೇದದ ಮಹತ್ವ ಹಾಗು. ಮಾನವ ಕುಲದ ಮೇಲೆ ಅದರ ಪ್ರಭಾವದ ಬಗ್ಗೆ ಮಾತನಾಡಿದರು.
ಐಸಿಸಿ ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್, ಐಸಿಸಿ ಕಾರ್ಯದರ್ಶಿ ಆ ಬ್ರಹ್ಮ ಜೋಸೆಫ್, ಐಸಿಸಿ ಮಾನವ ಸಂಪನ್ಮೂಲ ಹಾಗೂ ರಾಜ ದೂತಾವಾಸ ಕಾರ್ಯಾಲಯದ ಸೇವೆಗಳ. ಮುಖ್ಯಸ್ಥ ಸಜೀವ್ ಸತ್ಯಶೀಲನ್, ಐಸಿಸಿ ಶಾಲಾ ಚಟುವಟಿಕೆಗಳ ಮುಖ್ಯಸ್ಥ ಶಂತನು ದೇಶ್‌ಪಾಂಡೆ ಸಹಿತ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾದರು.





















































