ನಾಗ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ 25 ದಿನಗಳ ಕಾರ್ಯಕರ್ತ ವಿಕಾಸ್ ವರ್ಗ ದ್ವಿತೀಯ (ವಿಶೇಷ) ರೇಶಿಂಬಾಗ್‌ನಲ್ಲಿರುವ ಡಾ. ಹೆಡ್ಗೇವಾರ್ ಸ್ಮೃತಿ ಮಂದಿರದ ಸಂಕೀರ್ಣದ ಮಹರ್ಷಿ ವ್ಯಾಸ ಸಭಾಂಗಣದಲ್ಲಿ ಪ್ರಾರಂಭಗೊಂಡಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಡಾ.ಕೃಷ್ಣಗೋಪಾಲ್ ಅವರು ವರ್ಗವನ್ನು ಉದ್ಘಾಟಿಸಿದರು. ಅಖಿಲ ಭಾರತೀಯ ಸಹ ಸೇವಾಪ್ರಮುಖ್ ಮತ್ತು ವರ್ಗದ ಪಾಲಕ್ ಅಧಿಕಾರಿ ರಾಜಕುಮಾರ್ ಮಟಾಲೆ ಮತ್ತು ಜೋಧ್‌ಪುರ ಪ್ರಾಂತದ ಸಂಘಚಾಲಕ ಹರದಯಾಳ್ ವರ್ಮಾ ಅವರು ಉಪಸ್ಥಿತರಿದ್ದರು. ದೇಶಾದ್ಯಾಂತದಿಂದ 868 ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ. ವರ್ಗವು ಡಿಸೆಂಬರ್ 12, 2024ರಂದು ಕೊನೆಗೊಳ್ಳುತ್ತದೆ.


























































