ಲೆಬನಾನ್: ಇಸ್ರೇಲ್-ಪ್ಯಾಲೆಸ್ತೇನ್ ಸಮರದ ನಡುವೆ ಲೆಬನಾನ್, ಸಿರಿಯಾಗಳಲ್ಲಿ ಪೇಜರ್ಗಳ ನಿಗೀಢ ಸ್ಫೋಟ ಪ್ರಕರಣ ಆತಂಕ ಸೃಷ್ಟಿಸಿದೆ. ಪೇಜರ್ಗಳ ಸ್ಫೋಟದಿಂದ 9ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 2,800 ಮಂದಿ ಹಿಜ್ಬುಲ್ಲಾ ಸದಸ್ಯರು ಗಾಯಗೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಲೆಬನಾನ್ ಸರ್ಕಾರದ ಆರೋಗ್ಯ ಸಚಿವ ಫಿರಾಸ್ ಅಬಿಯಾಡ್, ಅಲ್ಲಲ್ಲಿ ಪೇಜರ್ಗಳು ಸ್ಫೋಟಗೊಂಡಿದ್ದು, ಗಾಯಾಳುಗಳ ಪೈಕಿ 200 ಮಂದಿ ಸ್ಥಿತಿ ತೀವ್ರಗೊಂಡಿದೆ. ಹೆಚ್ಚಿನವರ ಮುಖ, ಹೊಟ್ಟೆ, ಕೈಗಳಿಗೆ ಗಾಯಗಳಾಗಿವೆ ಎಂದವರು ತಿಳಿಸಿದ್ದಾರೆ.
ಲೆಬನಾನ್ ಮತ್ತು ಸಿರಿಯಾದ ಹಲವೆಡೆ ಏಕಕಾಲದಲ್ಲಿ ನೂರಾರು ಹ್ಯಾಂಡ್ ಪೇಜರ್ಗಳು ಸ್ಫೋಟಗೊಂಡಿವೆ. ಹಮಾಸ್ನ ಮಿತ್ರ ಸಂಘಟನೆಯಾಗಿರುವ ಹಿಜ್ಬುಲ್ಲಾಗಳ ಪೇಜರ್ ದಾಳಿ ನಡೆದಿದ್ದು ಇಸ್ರೇಲ್ ಈ ಕೃತ್ಯ ನಡೆಸಿದೆ ಎಂದು ಲೆಬನಾನ್ ಸರ್ಕಾರ ಆರೋಪಿಸಿದೆ.