ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರಾಜ್ಯದ19 ಪೊಲೀಸರಿಗೆ ಕೇಂದ್ರ ಸರ್ಕಾರ ರಾಷ್ಟ್ರಪತಿಗಳ ಪದಕ ಘೋಷಿಸಿದೆ. ಗಣನೀಯ ಸೇವೆಯನ್ನು ಪರಿಗಣಿಸಿ ಪ್ರತೀ ವರ್ಷ ಸ್ವಾತಂತ್ರ್ಯ ದಿನದಂದು ರಾಷ್ಟ್ರಪತಿ ಪದಕಗಳನ್ನು ಕೇಂದ್ರ ಗೃಹ ಇಲಾಖೆ ಪ್ರಕಟಿಸುತ್ತದೆ. ಅದರಂತೆ ಈ ಬಾರಿ ಕರ್ನಾಟಕದ 19 ಪೊಲೀಸ್ ಅಧಿಕಾರಿಗಳಿಗೆ ಈ ಪದಕ ಪ್ರಕಟವಾಗಿದೆ.
ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕ.
- ಎಂ.ಚಂದ್ರಶೇಖರ್, ಆಂತರಿಕಾ ಭದ್ರತಾ ವಿಭಾಗದ ಎಡಿಜಿಪಿ.
ಶ್ಲಾಘನೀಯ ಸೇವಾ ಪದಕ ಪುರಸ್ಕೃತರು:
- ಶ್ರೀನಾಥ್ ಎಂ ಜೋಷಿ, ಎಸ್ಪಿ ಲೋಕಾಯುಕ್ತ
- ಸಿ.ಕೆ ಬಾಬಾ, ಎಸ್ಪಿ ಬೆಂಗಳೂರು ಗ್ರಾಮಾಂತರ ಜಿಲ್ಲೆ
- ರಾಮಗೊಂಡ ಬಿ ಬಸರಗಿ, ಎಎಸ್ಪಿ, ಬಳ್ಳಾರಿ ಜಿಲ್ಲೆ
- ಎಂ.ಡಿ. ಶರತ್, ಎಸ್ಪಿ, ಸಿಐಡಿ, ಬೆಂಗಳೂರು
- ವಿ.ಸಿ. ಗೋಪಾಲರೆಡ್ಡಿ, ಡಿಸಿಪಿ, ಸಿಆರ್, ಪಶ್ಚಿಮ, ಬೆಂಗಳೂರು ನಗರ
- ಗಿರಿ ಕೆ.ಸಿ, ಡಿವೈಎಸ್ಪಿ, ಚನ್ನಪಟ್ಟಣ ಉಪ-ವಿಭಾಗ, ರಾಮನಗರ ಜಿಲ್ಲೆ
- ಮುರಳೀಧರ್ ಪಿ, ಡಿವೈಎಸ್ಪಿ, ಚಿಂತಾಮಣಿ ಉಪ-ವಿಭಾಗ, ಚಿಕ್ಕಬಳ್ಳಾಪುರ ಜಿಲ್ಲೆ
- ಬಸವೇಶ್ವರ, ಅಸಿಸ್ಟೆಂಟ್ ಡೈರೆಕ್ಟರ್, ರಾಜ್ಯ ಗುಪ್ತವಾರ್ತೆ, ಕಲಬುರಗಿ
- ಕೆ. ಬಸವರಾಜು, ಡಿವೈಎಸ್ಪಿ, ಐಎಸ್ಡಿ, ಕಲಬುರಗಿ
- ರವೀಶ್ ನಾಯಕ್, ಎಸಿಪಿ, ಸಿಸಿಆರ್ಬಿ, ಮಂಗಳೂರು ನಗರ
- ಎನ್. ಮಹೇಶ್, ಸಹಾಯಕ ನಿರ್ದೇಶಕರು, ರಾಜ್ಯ ಗುಪ್ತವಾರ್ತೆ, ಬೆಂಗಳೂರು
- ಪ್ರಭಾಕರ್ ಜಿ, ಎಸಿಪಿ, ಸಂಚಾರ ಯೋಜನೆ, ಬೆಂಗಳೂರು ನಗರ
- ಹರೀಶ್ ಎಚ್.ಆರ್, ಅಸಿಸ್ಟೆಂಟ್ ಕಮಾಂಡೆಂಟ್, 11ನೇ ಪಡೆ, ಕೆಎಸ್ಆರ್ಪಿ, ಹಾಸನ
- ಮಂಜುನಾಥ ಎಸ್. ಕಲ್ಲೆದೇವರ್, ಸಬ್ ಇನ್ಸ್ಪೆಕ್ಟರ್, ಎಫ್ಪಿಬಿ, ದಾವಣಗೆರೆ
- ಎಸ್. ಮಂಜುನಾಥ, ಆರ್ಪಿಐ, 3ನೇ ಪಡೆ, ಕೆಎಸ್ಆರ್ಪಿ, ಬೆಂಗಳೂರು
- ಗೌರಮ್ಮ ಜಿ., ಎಎಸ್ಐ, ಸಿಐಡಿ, ಬೆಂಗಳೂರು
- ಮಹಬೂಬಸಾಹೇಬ ಎನ್ ಮುಜಾವರ್, ಸಿಎಚ್ಸಿ, ಮನಗುಳಿ ಪೊಲೀಸ್ ಠಾಣೆ, ವಿಜಯಪುರ ಜಿಲ್ಲೆ
- ಬಿ. ವಿಜಯ್ ಕುಮಾರ್, ಹೆಡ್ ಕಾನ್ಸ್ಟೇಬಲ್, ಡಿಸಿಆರ್ಬಿ, ಉಡುಪಿ