ಮಕ್ಕಳಲ್ಲಿ ಮೊಬೈಲ್ ಬಳಕೆಯಿಂದ ನಾನಾ ಸಮಸ್ಯೆಗಳು ಉಂಟಾಗುತ್ತಿದ್ದು ಪೋಷಕರೇ ಎಚ್ಚರಿಕೆ ವಹಿಸಬೇಕಿದೆ.
ಮಕ್ಕಳಲ್ಲಿ ನಿರಂತರ ಮೊಬೈಲ್ ಬಳಕೆ ನಾನಾ ಅವಾಂತರ ಸೃಷ್ಟಿಯಾಗುತ್ತಿವೆ ಎಂಬುದನ್ನು ವೈದ್ಯ ಸಮೂಹ ದೃಢಪಡಿಸಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಿಗೆ ‘ಮಯೋಪಿಯಾ’ ಡಿಸೀಸ್ ಶುರುವಾಗಿದೆ ಎನ್ನುತ್ತಾರೆ ತಜ್ಞರು. ನೇತ್ರ ತಜ್ಞರು ಈ ಮಯೋಪಿಯಾ ಡಿಸೀಸ್ ಹೆಚ್ಚಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
‘ಮಯೋಪಿಯಾ’ ಕಾಯಿಲೆ ಬಗ್ಗೆ ಪ್ರತಿಷ್ಟಿತ ನಾರಾಯಣ ನೇತ್ರಾಲಯದ ಅಧ್ಯಕ್ಷರಾದ ಡಾ.ರೋಹಿತ್ ಶೆಟ್ಟಿ ಅವರು ಕಳವಳಕಾರಿ ಸಂಗತಿಯತ್ತ ಬೆಳಕು ಚೆಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಮಕ್ಕಳು ಬೈಲ್ ಅವಲಂಬಿತರಾಗಿದ್ದಾರೆ. ಅತಿಯಾದ ಮೊಬೈಲ್ ಫೋನ್ ಬಳಕೆಯಿಂದ ಮಯೋಪಿಯಾ ಡಿಸೀಜ್ ಬರಬಲ್ಲದು ಎಂಬ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಒಟ್ಟು ಮಕ್ಕಳ ಅರ್ಧದಷ್ಟು ಮಂದಿಗೆ ಅಂದರೆ ಶೇಕಡಾ 50ಕ್ಜೂ ಹೆಚ್ಚು ಮಂದಿಯಲ್ಲಿ ಈ ಸಮಸ್ಯೆ ಕಾಡಬಹುದು ಎಂಬ ಆತಂಕ ಇತ್ತು, ಆದರೆ, ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ, ಇನ್ನು 10-15 ವರ್ಷಗಳಲ್ಲಿ ಶೇಕಡಾ 70-80 ರಷ್ಟು ಮಕ್ಕಳು ಕನ್ನಡಕವನ್ನು ಅವಲಂಭಿಸಬೇಕಾಗಬಹುದು ಎಂದು ವಿಶ್ಲೇಷಿಸಿದ್ದಾರೆ.
ಪೋಷಕರೇ ಎಚ್ಚರ;
ಶಾಲಾ ಕೊಠಡಿಗಳ ಸನ್ನಿವೇಶವನ್ನೇ ಉದಾಹರಣೆಯಾಗಿ ಇಟ್ಟುಕೊಂಡು ಪರಿಸ್ಥಿತಿಯನ್ನು ಅವಲೋಕಿಸಿರುವ ನೇತ್ರ ತಜ್ಞರಾದ ಡಾ.ರೋಹಿತ್ ಶೆಟ್ಟಿ, ಕೆಲವು ವರ್ಷಗಳ ಹಿಂದೆ ಶಾಲಾ ತರಗತಿಗಳಲ್ಲಿ ಕನ್ನಡಕ ಧರಿಸಿದ ವಿದ್ಯಾರ್ಥಿಗಳ ಸಂಖ್ಯೆ ಬೆರಳೆಣಿಕೆಯಲ್ಲಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕನ್ನಡಕ ಧರಿಸದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಇದು ಭಾರತ ಮಾತ್ರವಲ್ಲ, ಅನೇಕ ದೇಶಗಳಲ್ಲಿ ಈ ದೃಷ್ಟಿ ಸಮಸ್ಯೆ ಇದ್ದು, ಚೀನಾ, ಸಿಂಗಾಪುರ, ಥೈವಾನ್, ಕೊರಿಯಾ ಮೊದಲಾದ ದೇಶಗಳಲ್ಲಿ ವೇಳೆ ಶೇಷ ನಿಯಮಗಳನ್ನೇ ರೂಪಿಸಲಾಗಿದೆ. ಭಾರತದಲ್ಲೂ ‘ಮಯೋಪಿಯಾ’ ಉಲ್ಬಣವಾಗುತ್ತಿದ್ದು, ಈ ಬಗ್ಗೆ ಜಾಗೃತಿ ವಹಿಸಿದರೆ ಮಾತ್ರ ಮಕ್ಕಳು ಈ ಕಾಯಿಲೆಯಿಂದ ಪಾರಾಗಬಹುದು ಎನ್ನುತ್ತಾರೆ.
‘ಮಯೋಪಿಯಾ’ ಕುರಿತಂತೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ರಾಜ್ಯದ ಪ್ರತಿಷ್ಠಿತ ನಾಯಾಯಣ ನೇತ್ರಾಲಯ ಆಸ್ಪತ್ರೆಯು ಜುಲೈ 28 ರಂದು ‘ಮಯೋಪಿಯ ಜಾಗೃತಿ ಓಟ’ ಆಯೋಜಿಸಿದೆ. ಈ ಜಾಥಾ ಕೂಡಾ ಬೆಳಿಗ್ಗೆ 7.30ರಿಂದ 11 ಗಂಟೆವರೆಗೆ ಆಯೋಜಿಸಿರುವುದೂ ವಿಶೇಷ. (Narayana Nethralaya, is or- ganising ‘Sun, Fun, Fight Myopia on the Run, on July 28 at Rajendra Singhji Ar- my Officers Institute, M.G. Road, Bengaluru). ‘ಮಯೋಪಿಯಾ’ ಖಾಯಿಲೆಯನ್ನು ಹೇಗೆ ತಡೆಗಟ್ಟಬಹುದು ಎಂಬ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಆಸ್ಪತ್ರೆ ಪ್ರಮುಖರು ತಿಳಿಸಿದ್ದಾರೆ.
ಮಯೋಪಿಯಾ ಡಿಸೀಜ್ ಬಗ್ಗೆ ಈಗಾಗಾಲೇ ಆತಂಕ ಶುರುವಾಗಿದ್ದ, ಮಕ್ಜಳ ಆರೋಗ್ಯ ಬಗ್ಗೆ ಪೋಷಕರೇ ಕಾಳಜಿ ವಹಿಸಬೇಕಾಗಿದೆ. ಮಕ್ಕಳ ಮೊಬೈಲ್ ಸ್ಕ್ರೀನಿಂಗ್ ಟೈಮ್ ಹೆಚ್ಚಾದಂತೆ ಮಯೋಪಿಯಾ ಕಾಯಿಲೆ ಬಲಗೊಳ್ಳಬಹುದು. ಇದರಿಂದ ದೃಷ್ಟಿ ಮೇಲೆ ಅಡ್ಡಪರಿಣಾಮ ಬೀಳುವುದು ಖಚಿತ. ಇಂತಹಾ ದೃಷ್ಠಿದೋಷದಂತಹಾ ಸಮಸ್ಯೆ ಈಗಾಗಲೇ ಹೆಚ್ಚುತ್ತಿವೆ. ಮಕ್ಕಳಿಗೆ ಬರ್ತಿವೆ. ಹಾಗಾಗಿ ಮಕ್ಕಳು ಮೊಬೈಲ್‌ನಿಂದ ಸಾಕಷ್ಟು ಅಂತರ ಕಾಯ್ದುಕೊಂಡಷ್ಟು ಉತ್ತಮ. ಸಮಸ್ಯೆ ಹೇಗಾದರೂ ಎದುರಾಗಬಹುದು. ಅದನ್ನು ಎದುರಿಸಲು ಮಕ್ಕಳೂ ಸದೃಢರಾಗಬೇಕು. ಪ್ರಮುಖವಾಗಿ ಸೂಕ್ತ ಆಹಾರವಷ್ಟೇ ಅಲ್ಲ, ಬೆಳಗ್ಗಿನ ಹೊತ್ತು ಹೊರಾಂಗಣ ಚಟುವಟಿಕೆಗಳಲ್ಲೂ ಮಕ್ಕಳು ತೊಡಗಿಕೊಳ್ಳಬೇಕು. ಆಗ ಕಣ್ಣಿನ ಆರೋಗ್ಯಕ್ಕೆ ಪೂರಕವಾದ ಡೊಪಾಮಿನ್ (Dopamine) ಹಾಗೂ ವಿಟಮಿನ್ ಡಿ ಸಿಗುತ್ತದೆ. ಇದರಿಂದ ಮಕ್ಕಳು ಸಾಕಷ್ಟು ಆರೋಗ್ಯವಂತರಾಗಲು ಸಾಧ್ಯವಿದೆ ಎಂದು ಡಾ.ರೋಹಿತ್ ಶೆಟ್ಟಿ ಪ್ರತಿಪಾದಿಸಿದ್ದಾರೆ.
ಈ ಕುರಿತಂತೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ರಾಜ್ಯದ ಪ್ರತಿಷ್ಠಿತ ನಾಯಾಯಣ ನೇತ್ರಾಲಯ ಆಸ್ಪತ್ರೆಯು ಜುಲೈ 28 ರಂದು ‘ಮಯೋಪಿಯ ಜಾಗೃತಿ ಓಟ’ ಆಯೋಜಿಸಿದೆ. ಈ ಜಾಥಾ ಕೂಡಾ ಬೆಳಿಗ್ಗೆ 7.30ರಿಂದ 11 ಗಂಟೆವರೆಗೆ ಆಯೋಜಿಸಿರುವುದೂ ವಿಶೇಷ. (Narayana Nethralaya, is or- ganising ‘Sun, Fun, Fight Myopia on the Run, on July 28 at Rajendra Singhji Ar- my Officers Institute, M.G. Road, from 7.30 to 11am) ‘ಮಯೋಪಿಯಾ’ ಖಾಯಿಲೆಯನ್ನು ಹೇಗೆ ತಡೆಗಟ್ಟಬಹುದು ಎಂಬ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಆಸ್ಪತ್ರೆ ಪ್ರಮುಖರು ತಿಳಿಸಿದ್ದಾರೆ.