ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ನೇತೃತ್ವದ ಎನ್.ಡಿ.ಎ ಒಕ್ಕೂಟವೇ ಜಯಶಾಲಿಯಾಗಲಿದೆ ಎಂಬ ಲೆಕ್ಕಾಚಾರ ಸಾಗಿದೆ. ಅಂತಿಮ ಹಂತದ ಮತದಾನ ಶನಿವಾರ ಮುಕ್ತಾಯಗೊಳ್ಳುತ್ತಿದ್ದಂತೆಯೇ ಎಕ್ಸಿಟ್ ಪೋಲ್ ಸಮೀಕ್ಷಾ ಫಲಿತಾಂಶ ಪ್ರಟವಾಗಿವೆ. ಬಹುತೇಕ ಸಂಸ್ಥೆಗಳ ಸಮೀಕ್ಷೆ ಪ್ರಕಾರ ಬಿಜೆಪಿ ನೇತೃತ್ವದ ಎನ್.ಡಿ.ಎ ಒಕ್ಕೂಟವೇ ಅಧಿಕಾರಕ್ಕೆ ಬರಲಿದೆ ಎಂದು ವಿಶ್ಲೇಷಿಸಿದೆ.
ಇತ್ತ ಕರ್ನಾಟಕದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿವೆ ಎಂದು ಮತದಾನೋತ್ತರ ಸಮೀಕ್ಷೆ ಹೇಳಿದೆ.
ಟಿವಿ9 ಭಾರತ್ ವರ್ಷ್-ಪೋಲ್ಸ್ಟ್ರಾಟ್ ಸಮೀಕ್ಷೆ
ಎನ್ಡಿಎ- 20
ಕಾಂಗ್ರೆಸ್- 8
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ
ಎನ್ಡಿಎ- 23-25
ಕಾಂಗ್ರೆಸ್ 3-5
ಇಂಡಿಯಾ ಟಿವಿ-ಸಿಎನ್ಎಕ್ಸ್ ಸಮೀಕ್ಷೆ
ಎನ್ಡಿಎಗೆ 19-25
ಕಾಂಗ್ರೆಸ್ 4-8
ಜನ್ ಕೀ ಬಾತ್
ಎನ್ಡಿಎ 21-23
ಕಾಂಗ್ರೆಸ್ 7-5
ರಿಪಬ್ಲಿಕ್ ಟಿವಿ-ಪಿ ಮಾರ್ಕ್ ಸಮೀಕ್ಷೆ
ಎನ್ಡಿಎ 22
ಕಾಂಗ್ರೆಸ್ 6
ಎಬಿಪಿ ನ್ಯೂಸ್-ಸಿ ವೋಟರ್ ಸಮೀಕ್ಷೆ
ಎನ್ಡಿಎ 23-25
ಕಾಂಗ್ರೆಸ್ 3-5
ಇಂಡಿಯಾ ನ್ಯೂಸ್-ಡಿ-ಡೈನಾಮಿಕ್ಸ್ ಸಮೀಕ್ಷೆ
ಎನ್ಡಿಎ 23
ಕಾಂಗ್ರೆಸ್ 5














































































