ಇಸ್ಲಾಮಾಬಾದ್: ಪಾಕ್ ಆಕ್ರಮಿತ ಕಾಶ್ಮೀರ (POK) ನಮ್ಮದಲ್ಲ ಎಂದು ಪಾಕಿಸ್ಥಾನ ಕೊನೆಗೂ ಒಪ್ಪಿಕೊಂಡಿದೆ. ಪ್ರಕರಣವೊಂದರಲ್ಲಿ ಅಧಿಕಾರ ವ್ಯಾಪ್ತಿಯ ಪ್ರಶ್ನೆ ಉದ್ಭವವಾದ ಸಂದರ್ಭದಲ್ಲಿ ಪಾಕಿಸ್ತಾನದ ಅಟಾರ್ನಿ ಜನರಲ್ ಈ ವಿಷಯ ಅನಾವರಣ ಮಾಡಿದ್ದಾರೆ.
ಮೇ 15ರಂದು ರಾವಲ್ಪಿಂಡಿಯಲ್ಲಿ ನಡೆದ ಕಾಶ್ಮೀರಿ ಕವಿಯ ಅಪಹರಣ ಪ್ರಕರಣ ಸಂಬಂಧ ಹೈಕೋರ್ಟ್ನಲ್ಲಿ ವಿಚಾರಣೆ ನಡೆದಿದೆ. ಅಹ್ಮದ್ ಫಹಾದ್ ಶಾ ಎಂಬವರ ಅಪಹರಣ ಪ್ರಕರಣದ ವಿಚಾರಣೆ ವೇಳೆ ಪಾಕ್ ಸರ್ಕಾರದ ಹೆಚ್ಚುವರಿ ಅಟಾರ್ನಿ ಜನರಲ್ ಅಲ್ಲಿನ ಸರ್ಕಾರದ ಪರ ವಾದ ಮಂಡಿಸಿದ್ದಾರೆ, POK ಪಾಕಿಸ್ತಾನದ ಆಡಳಿತದ ವ್ಯಾಪ್ತಿಯಲ್ಲಿಲ್ಲ. ಹಾಗಾಗಿ ನಮ್ಮ ದೇಶದ ಕಾನೂನು ಅಲ್ಲಿ ಅನ್ವಯವಾಗುವುದಿಲ್ಲ’ ಎಂದು ಗಮನಸೆಳೆದಿದ್ದಾರೆ. ಅಪಹೃತ ಕವಿ ವಿದೇಶಿ ನೆಲದಲ್ಲಿನ ಪೊಲೀಸರ ವಶದಲ್ಲಿದ್ದಾರೆ. ಅವರನ್ನು ಪಾಕಿಸ್ತಾನದ ಕೋರ್ಟ್ಗೆ ಹಾಜರುಪಡಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.














































































