ನವದೆಹಲಿ: ಆಮ್ ಆದ್ಮಿ ಪಕ್ಷದ ಸಂಸದೆ ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣದ ತನಿಖೆಗೆ ಹೊಸ ತಿರುವು ಸಿಕ್ಕಿದೆ. ಪ್ರಕರಣ ಸಂಬಂಧ ಪೊಲೀಸರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್‌ನನ್ನು ಬಂಧಿಸಿದ್ದಾರೆ.
ಸಂಸದೆ ಮೇಲಿನ ಹಲ್ಲೆ ಪ್ರಕರಣ ವಿಚಾರದಲ್ಲಿ ರಾಜಕೀಯ ನಾಯಕರ ನಢುವೆ ವಾಕ್ಸಮರ ನಡೆದಿದೆ. ಈ ನಡುವೆಯೇ ತನಿಖೆಯ ಅಖಾಡಕ್ಕೆ ಧುಮುಕಿರುವ ದೆಹಲಿ ಪೊಲೀಸರು ಶನಿವಾರ ಮಧ್ಯಾಹ್ನ ಸಿಎಂ ಕೇಜ್ರಿವಾಲ್ ನಿವಾಸದಿಂದ ಕುಮಾರ್‌ನನ್ನು ವಶಕ್ಕೆ ಪಡೆಸಿದ್ದಾರೆ.
ಮೇ 13 ರಂದು ಸಿಎಂ ಕೇಜ್ರಿವಾಲ್ ನಿವಾಸದಲ್ಲಿ ಆಮ್ ಆದ್ಮಿಪಕ್ಷದ ರಾಜ್ಯಸಭಾ ಸದಸ್ಯೆ ಮಲಿವಾಲ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ. ಕುಮಾರ್ ವಿಭವ್ ಕುಮಾರ್ ಅವರು ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ.

























































