ಬೆಂಗಳೂರು: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಕಗ್ಗೊಲೆ ಕೃತ್ಯವನ್ನು ಸ್ಯಾಂಡಲ್ ವುಡ್ ಗಣ್ಯರೂ ಖಂಡಿಸಿದ್ದಾರೆ. ನೇಹಾ ಹತ್ಯೆ ಬಗ್ಗೆ ಆಕ್ರೋಶ ಹೊರಹಾಕಿರುವ ನಟಿ ರಚಿತಾ ರಾಮ್, ‘ಜಾತಿ, ಧರ್ಮ ಯಾವುದೇ ಆಗಿರಲಿ. ಮೊದಲು ನಾವು ಮಾನವರು. ನಾನು ಈ ಪೋಸ್ಟ್ ಹಾಕಲು ಕಾರಣ ಆಕೆಗೆ (ನೇಹಾ) ಆಗಿರುವ ಅನ್ಯಾಯ. ತಪ್ಪು ಯಾರೇ ಮಾಡಿದರು ತಪ್ಪೆ’ ಎಂದಿದ್ದಾರೆ.
View this post on Instagram
ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರುವ ರಚಿತಾ ರಾಮ್, ‘ಸರ್ಕಾರಕ್ಕೆ ನನ್ನ ಒಂದು ಮನವಿ! ರಾಜಕೀಯ ಆಯಾಮದಲ್ಲಿ ಈ ವಿಷಯವನ್ನು ತರಬೇಡಿ. ಆಗಿರೋದು ಅನ್ಯಾಯ. ಈಗ ನ್ಯಾಯ ಬೇಕಾಗಿದೆ ಅಷ್ಟೆ. ಈ ರೀತಿಯ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಅವರನ್ನು ಜನಸಾಮಾನ್ಯರ ಕೈಗೆ ಒಪ್ಪಿಸಿ’ ಎಂದಿದ್ದಾರೆ.