ಬಿಗ್ ಬಾಸ್ ಹುಡುಗಿ, ನಟಿ ಸಂಗೀತಾ ಶೃಂಗೇರಿ ಬಗ್ಗೆ ಎಲ್ಲರಿಗೂ ಕುತೂಹಲ. ಅದರಲ್ಲೂ ಅವರು ಮದುವೆಯಾಗುವ ಅದೃಷ್ಟವಂತ ಯಾರು ಎಂಬ ಕುತೂಹಲ ಅಭಿಮಾನಿಗಳದ್ದು.
‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಎರಡನೇ ರನ್ನರ್ ಅಪ್ ಆಗಿರುವ ಸಂಗೀತಾ ಶೃಂಗೇರಿ ಅವರು ಕಲರ್ಸ್ ಕನ್ನಡ ಆಯೋಜಿಸಿದ್ದ ‘ಕೆಂಡಸಂಪಿಗೆ’ ಸೀರಿಯಲ್ ಸಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ಅವರಿಗೆ ಅಚ್ಚರಿಯ ಸನ್ನಿವೇಶವೊಂದು ಎದುರಾಗಿದೆ. ಸಮಾರಂಭದ ವೇದಿಕೆಯಲ್ಲಿ ಸರಣಿ ಪ್ರಶ್ನೆಗಳನ್ನು ಮುಂದಿಟ್ಟ ನಿರೂಪಕ ನಿರಂಜನ್, ಮದುವೆ ಆಗೋ ಹುಡುಗ ಇರೋದು ಹೊಸಪೇಟೆಯಲ್ಲಾ? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಆದರೆ ಸಂಗೀತ ಅವರ ಉತ್ತರ ಅನಾವರಣವಾಗಿಲ್ಲ.
ಭಾನುವಾರ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಈ ಬಗ್ಗೆ ಉತ್ತರ ಸಿಗುವ ನಿರೀಕ್ಷೆ ಅಭಿಮಾನಿಗಳದ್ದು.
View this post on Instagram






































































