.ಬೆಂಗಳೂರು: ಇದು ಅನನ್ಯ ಕಾರ್ಯಕ್ರಮ ಧರ್ಮ ರಕ್ಷಕರನ್ನು ಗೌರವಿಸಿದ ಅಪೂರ್ವ ಸಮಾರಂಭ. ದಶಕಗಳ ಹಿಂದೆ ದೇಸವನ್ನು ದಾಸ್ಯಮುಕ್ತಗೊಳಿಸಿದ ಸೇನಾನಿಗಳ ಬಗ್ಗೆ ಸಂಘದ ಹಿರಿಯರು ಯೋಗಕ್ಷೇಮ ವಿಚಾರಿಸಿದ ವೈಖರಿ ಗಮನಸೆಳೆಯಿತು.
ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಮುಕ್ತಿಗಾಗಿ ಹೋರಾಟ ನಡೆಸಿದ ಕರಸೇವಕರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಗಮವಾದರು. 1990ರ ಹಾಗೂ 1992ರಲ್ಲಿ ಅಯೋಧ್ಯೆ ಶ್ರೀರಾಮಜನ್ಮಭೂಮಿ ಹೋರಾಟದ ಆಂದೋಲನದಲ್ಲಿ ಭಾಗವಹಿಸಿದ್ದ ಬೆಂಗಳೂರಿನ ಹಿರಿಯ ಕರಸೇವಕರೊಂದಿಗೆ ಚಾಮರಾಜಪೇಟೆಯ ಕೇಶವಶಿಲ್ಪದಲ್ಲಿ ಸಂವಾದ ಏರ್ಪಡಿಸಲಾಗಿತ್ತು.
ಕರಸೇವಕರಾಗಿ ಭಾಗವಹಿಸಿದ್ದ ಹಿರಿಯ ಕಾರ್ಯಕರ್ತರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಪ್ರಚಾರಕ್ ಸುಧೀರ್ ಮಾತನಾಡಿದರು.
ಹಿರಿಯ ಕಾರ್ಯಕರ್ತರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ, ಬೆಂಗಳೂರು ಮಹಾನಗರ ಸಂಘಚಾಲಕ ಮಿಲಿಂದ್ ಗೋಖಲೆ ಉಪಸ್ಥಿತರಿದ್ದರು.







































































