ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಡಬಲ್ ಮರ್ಡರ್ ಜನರನ್ನು ಬೆಚ್ಚಿಬೀಳಿಸಿದೆ. ಕೊಲೆ ಮಾಡಿದ ಆರೋಪಿ ತಾನೇ ಪೊಲೀಸರಿಗೆ ಶರಣಾಗಿರುವ ಅಚ್ಚರಿಯ ಸನ್ನಿವೇಶಕ್ಕೂ ಈ ಪ್ರಕರಣ ಸಾಕ್ಷಿಯಾಗಿದೆ.
ಬೆಂಗಳೂರಿನ ಕುಂಬಾರಪೇಟೆಯ ಹರಿ ಮಾರ್ಕೆಟಿಂಗ್ ಆವರಣದಲ್ಲಿ 68 ವರ್ಷದ ಮಹೇಂದ್ರ ಹಾಗೂ 55 ವರ್ಷದ ಸುರೇಶ್ ಎಂಬವರ ಕೊಲೆ ನಡೆದಿದೆ. ಭದ್ರ ಎಂಬ ವ್ಯಕ್ತಿ ಆಸ್ತಿ ವಿಚಾರಕ್ಕಾಗಿ ಈ ಕೃತ್ಯ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.







































































