ಬೆಂಗಳೂರು: ಸ್ಪಾ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಅಡ್ಡೆಗೆ ಬೆಂಗಳೂರಿನ ಸಿಸಿಬಿ ತಂಡ ದಾಳಿ ಮಾಡಿ ಹಲವರನ್ನು ವಶಕ್ಕೆ ಪಡೆದಿದೆ.
ಬೆಂಗಳೂರಿನ ಓಲ್ಡ್ ಮದ್ರಾಸ್ ರಸ್ತೆಯ ಟಿನ್ ಫ್ಯಾಕ್ಟರಿ ಬಳಿ ಮಸಾಜ್ ಪಾರ್ಲರ್ ಮೇಲೆ ಸಿಸಿಬಿ ಪೊಲೀಸರು ಕ್ಷಿಪ್ರ ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಪರಿಶೀಲಿಸಿದಾಗ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಬಗ್ಗೆ ದೃಢಪಟ್ಟಿದೆ ಎಂದಿರುವ ಪೊಲೀಸರು, ಸ್ಪಾ ಸಂಸ್ಥೆಯ ಮಾಲೀಕ ಹಾಗೂ 44 ಮಹಿಳೆಯರನ್ನು, 34 ಮಂದಿ ಇತರರನ್ನು ವಶಕ್ಕೆ ಪಡೆಡಿದ್ದಾರೆ.




















































