ರಾಯಚೂರು: ಸಿಂಧನೂರು ಸಮೀಪ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಪಗಡದಿನ್ನಿ ಕ್ಯಾಂಪ್ ಬಳಿ ಲಾರಿ ಮತ್ತು ಟಾಟಾ ಏಸ್ ನಡುವೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.
ಮದುವೆ ಸಮಾರಂಭವೊಂದಕ್ಕೆ ಡೆಕೋರೇಷನ್ ಮಾಡಲು ಹೊರಟಿದ್ದ ಕೆಲಸಗಾರರಿದ್ದ ವಾಹನ ಅಪಘಾತಕ್ಕೀಡಾಗಿದೆ. ಇವರು ಸಿಂಧನೂರಿನಿಂದ ಮಸ್ಕಿಯ ಮದ್ಲಾಪುರ ಗ್ರಾಮಕ್ಕೆ ಟಾಟಾ ಏಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಎದುರಿನಿಂದ ಬಂದ ಲಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಮೃತರರನ್ನು ಅಂಬರೀಶ್ (30), ರಮೇಶ್ (28), ಇಸ್ಮಾಯಿಲ್ (27), ರವಿ (20) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


























































