ಬೆಂಗಳೂರು: ಜನಹಿತ ಸಾರಿಗೆ ಸೇವೆ ಮೂಲಕ ದೇಶದಲ್ಲೇ ಖ್ಯಾತ ಸಂಸ್ಥೆ ಎನಿಸಿರುವ KSRTC ಇದೀಗ ತನ್ನ ಸೇವೆಯನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯಲು ಸಜ್ಜಾಗಿದೆ. ಈ ವರೆಗೂ ಪ್ರಯಾಣಿಕರ ಸೇವೆ ಒದಗಿಸುತ್ತಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆ KSRTC ಇನ್ನು ಮುಂದೆ ಕಾರ್ಗೋ ಸೇವೆಯನ್ನು ಒದಗಿಸಲಿದೆ.
ಕೆಎಸ್ಸಾರ್ಟಿಸಿ ನೌಕರರ ಪಾಳಯದಲ್ಲೂ ಸಂತಸ:
‘ಶಕ್ತಿ’ ಯೋಜನೆಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆದಾಯವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿದೆ. ಇದೀಗ ಮತ್ತೊಂದು ಯೋಜನೆ ಮೂಲಕ ನಿಗಮಕ್ಕೆ ಮತ್ತಷ್ಟು ಬಲ ಸಿಗುವ ವಿಶ್ವಾಸ ನಿಗಮದ ನೌಕರರದ್ದು. ಲಾರಿಗಳನ್ನು ಹೊಂದುವ ಮೂಲಕ ಸರಕು ಸಾಗಣೆ ಸೇವೆ ಒದಗಿಸಿ ಆ ಮೂಲಕ ನಿಗಮದ ಆದಾಯವನ್ನು ದುಪ್ಪಟ್ಟು ಮಾಡುವ ಪ್ರಯತ್ನ ಸರ್ಕಾರದ ವತಿಯಿಂದ ನಡೆದಿದೆ. ಪ್ರಸಕ್ತ ಸಾರಿಗೆ ಸಚಿವರ ನೇತೃತ್ವದಲ್ಲಿ ನಡೆದಿರುವ ಈ ಕಸರತ್ತು ಭಾರೀ ನಿರೀಕ್ಷೆ ಹುಟ್ಟಿಸಿದೆ.
ಈ ನಡುವೆ, ಕಾರ್ಗೋ ಸೇವೆ ಕುರಿತಂತೆ ಆಡಳಿತಾರೂಢ ಕಾಂಗ್ರೆಸ್ ಕೂಡಾ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. ‘ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ “ಶಕ್ತಿ” ನೀಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ KSRTC ಲಾರಿಗಳು ರಸ್ತೆಗೆ ಇಳಿಯಲಿವೆ, ಲಗೇಜ್ ಗಳನ್ನು ರಾಜ್ಯಾದ್ಯಂತ ಸಾಗಣೆ ಮಾಡಲು KSRTC ಲಾಜಿಸ್ಟಿಕ್ಸ್ ವ್ಯವಹಾರಕ್ಕೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಿದೆ. ಸರ್ಕಾರಿ ಸಂಸ್ಥೆಗಳನ್ನು ಲಾಭದ ಹಂತಕ್ಕೆ ಕೊಂಡೊಯ್ಯುವ ಇಚ್ಛಾಶಕ್ತಿ ನಮ್ಮ ಸರ್ಕಾರಕ್ಕಿದೆ’ ಎಂದು ಕಾಂಗ್ರೆಸ್ ಹೇಳಿದೆ.
ಬಿಜೆಪಿ ಅವಧಿಯಲ್ಲಿ ನಷ್ಟದ ಕೂಪಕ್ಕೆ ಬಿದ್ದಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ "ಶಕ್ತಿ" ನೀಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ ನಮ್ಮ ಸರ್ಕಾರ.
ಮುಂದಿನ ದಿನಗಳಲ್ಲಿ KSRTC ಲಾರಿಗಳು ರಸ್ತೆಗೆ ಇಳಿಯಲಿವೆ, ಲಗೇಜ್ ಗಳನ್ನು ರಾಜ್ಯಾದ್ಯಂತ ಸಾಗಣೆ ಮಾಡಲು KSRTC ಲಾಜಿಸ್ಟಿಕ್ಸ್ ವ್ಯವಹಾರಕ್ಕೂ ತನ್ನ ವ್ಯಾಪ್ತಿಯನ್ನು… pic.twitter.com/X56SsTRLOU
— Karnataka Congress (@INCKarnataka) August 28, 2023