ದೊಡ್ಡಬಳ್ಳಾಪುರ: ಕ್ರೀಡೆಯೂ ದೈಹಿಕ, ಮಾನಸಿಕ ಆರೋಗ್ಯಕ್ಕೆ ಉತ್ತೇಜನ ನೀಡುವ ಜತೆಗೆ ದೇಶಕ್ಕೆ ಕೀರ್ತಿ ತರಲು ಕ್ರೀಡೆ ಅನುವು ಮಾಡಿಕೊಡಲಿದೆ ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.
ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ ಗುರುವಾರ 34ನೇ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನವೋದಯ ವಿದ್ಯಾಲಯ ಕಲಿಕೆಗೆ ಉತ್ತಮ ವಾತವರಣ ಹೊಂದಿದೆ. ಇಲ್ಲಿ ಸಾಕಷ್ಟು ಸೌಲಭ್ಯಗಳು ಲಭ್ಯವಿದೆ. ಆದರೂ ಕ್ರೀಡಾ ಕೂಟಗಳ ಆಯೋಜನೆ ಸ್ಟೇಡಿಯಂ ಸೇರಿದಂತೆ ನಾನಾ ಸೌಲಭ್ಯಗಳು ಅಗತ್ಯವಾಗಿದ್ದು, ಮುಂದಿನ ದಿನಗಳಲ್ಲಿ ಒದಗಿಸಲು ಪ್ರಯತ್ನಿಸಲಾಗುತ್ತದೆ. ಇದರ ಜತೆಗೆ ಸಿಎಸ್ಆರ್ ನಿಧಿ, ಸರ್ಕಾರದ ಅನುದಾನ ತರಲು ಪ್ರಯತ್ನಿಸಲಾಗುತ್ತಿದೆ ಎಂದರು.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯದ ಶಾಲೆಯ ಇಲ್ಲದಿರುವದರಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಅದನ್ನು ತರಲು ಕ್ರಮವಹಿಸಲಾಗುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆಗೂ ಒತ್ತು ಕೊಡಬೇಕು. ನಿರಂತರ ಅಭ್ಯಾಸದಿಂದ ಗೆಲವು ಸಾಧ್ಯ. ಪರಿಶ್ರಮ, ಸವಾಲು ಎದುರಿಸದರೆ ಮಾತ್ರ ಯಶಸ್ಸು ನಮ್ಮದಾಗುತ್ತದೆ. ವಿದ್ಯಾರ್ಥಿ ಜೀವನ ಕಲಿಯಲು, ಸಾಧಿಸಲು, ಪ್ರಯತ್ನಿಸಲು ಉತ್ತಮ ಸಮಯವಾಗಿದೆ. ನಿರಂತರ ಪ್ರಯತ್ನ ಭಾಗವಹಿಸುವಿಕೆಯಿಂದ ಗೆಲುವು ನಮ್ಮದಾಗುತ್ತದೆ. ಕ್ರೀಡೆಯಲ್ಲಿ ಸೋಲು ಗೆಲುವು ಏನೇ ಆದರೂ ಕ್ರೀಡಾ ಸ್ಪೂರ್ತಿ ಮರೆಯಬಾರದು ಎಂದರು.
ಪ್ರಾಂಶುಪಾಲ ಆರ್ ಚಕ್ರವರ್ತಿ ಮಾತನಾಡಿ ಅಭ್ಯಾಸದಿಂದ ಮಾತ್ರ ಯಶಸ್ಸು ನಮ್ಮದಾಗುತ್ತದೆ. ಕಳೆದ ವರ್ಷದಲ್ಲಿ ಜಿಲ್ಲಾ ಜೆಎನ್ ಯು ವಿದ್ಯಾರ್ಥಿ ದೈಹಿಕ ಶಿಕ್ಷಣದಲ್ಲಿ ನ್ಯಾಷನಲ್ ರ್ಯಾಂಕ್ ಪಡೆದಿದ್ದಾನೆ. ಇದಲ್ಲದೆ ಸಮೀಪದ ಶಾಲೆಗಳ ಸಹಕಾರದೊಂದಿಗೆ ಅನೇಕ ಕಾರ್ಯಕ್ರಮಗಳನ್ನು ಜೆಎನ್ ಯು ಬೆಂಗಳೂರು ಗ್ರಾಮಾಂತರದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಬಿಇಓ ಆರ್ ರಂಗಪ್ಪ, ಕೆಎಂಎಫ್ ನಿರ್ದೆಶಕ ಬಿಸಿ ಆನಂದ್ ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ರಂಗರಾಜು, ವಿವಿಧ ಜಿಲ್ಲೆಯ ಜೆಎನ್ ಯು ವಿದ್ಯಾರ್ಥಿಗಳು, ಶಿಕ್ಷಕರು ,ಕ್ರೀಡಾಪಟುಗಳು ಹಾಜರಿದ್ದರು.






















































