ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದಲ್ಲಿನ ಮಂತ್ರಿಗಳಿಗೆ ಲಂಚ, ಹಣ ಮಾಡೋದರ ಬಗ್ಗೇನೆ ಆಅಕ್ತಿಯೇ ಹೊರತು ಜನರ ಬಗ್ಗೆ ಚಿಂತನೆಯೇ ಇಲ್ಲ ಎಂದು ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ರೋಡ್ ಶೋದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಎಲ್ಲ ನಮ್ಮ ತಾಯಂದಿರಿಗೆ ಗೊತ್ತಿದೆ ಬೆಲೆಯೇರಿಕೆ ಎಷ್ಟು ಕಷ್ಟ ತಂದಿವೆ ಅಂತ ಅವರಿಗೆ ಚೆನ್ನಾಗಿ ಗೊತ್ತಿದೆ. ಗ್ಯಾಸ್ ಸೇರಿದಂತೆ ಅಗತ್ಯ ದಿನ ಬಳಕೆ ವಸ್ತುಗಳ ಬೆಲೆಯೇರಿಕೆಯಿಂದಾಗಿ ಜನರಿಂದು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ ಎಂದರು. ಜನರ ಕಷ್ಟಗಳನ್ನು ಅವರ ಬವಣೆಗಳನ್ನು ಅರಿತುಕೊಳ್ಳುವಲ್ಲಿ ಮತ್ತು ಬಗೆಹರಿಸುವಲ್ಲಿ ಈ ಬಿಜೆಪಿ ಸರ್ಕಾರ ವಿಫಲವಾಗಿದೆ. ಜನರ ಕಷ್ಟವನ್ನು ನೀಗಿಸುವುದು ಸರ್ಕಾರದ ಕರ್ತವ್ಯವಾಗಬೇಕಿತ್ತು. ಆದರೆ, ನಿರುದ್ಯೋಗ ನಿವಾರಣೆ, ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಸರ್ಕಾರದ ಕರ್ತವ್ಯ ಆಗಿರುತ್ತದೆ. ಆದರೆ ಇದು ಯಾವುದನ್ನು ಈ ಬಿಜೆಪಿ ಸರ್ಕಾರ ಮಾಡಿಲ್ಲ ಎಂದು ದೂರಿದರು.
LIVE: Smt. @priyankagandhi ji holds a massive roadshow in Vijayanagar, Karnataka.https://t.co/nssDjwX7hw
— Karnataka Congress (@INCKarnataka) May 8, 2023
ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ ಸರ್ಕಾರ ನಮ್ಮ ಕಾಂಗ್ರೆಸ್ ಪಕ್ಷದ ಶಾಸಕರನ್ನು ಖರೀದಿಸಿ ಅವರಿಗೆ ಆಸೆ, ಆಮಿಷಗಳನ್ನು ಒಡ್ಡಿ ವಾಮ ಮಾರ್ಗದ ಮೂಲಕ ಸರ್ಕಾರ ರಚನೆ ಮಾಡಿರುವಂತಹದು, ಇಂದು ಈ ಸರ್ಕಾರಕ್ಕೆ 40% ಕಮಿಷನ್ ಸರ್ಕಾರ ಎಂದು ಹೆಸರಿದೆ. ರೈತರಿಗೆ, ಜನಸಾಮಾನ್ಯರಿಗೆ ಈ ಸರ್ಕಾರದಿಂದ ಏನೂ ಪ್ರಯೋಜನವಾಗಿಲ್ಲ. ಸರ್ಕಾರದ ಪ್ರತಿಯೊಂದು ಕೆಲಸಕ್ಕೂ ಇಂದು ಲಂಚ ರಿಂಗಣಿಸುತ್ತಿದೆ ಎಂದ ಪ್ರಿಯಾಂಕಾ ಗಾಂಧಿ, ಜಿಎಸ್ಟಿಯಿಂದಾಗಿ ಇಂದು ಸಣ್ಣ ಉದ್ದಿಮೆದಾರರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇಂದು ಯಾರ ಉದ್ಯಮವು ಅಭಿವೃದ್ಧಿಯಾಗಿಲ್ಲ. ಇಂದು ಜನಸಾಮಾನ್ಯನಿಂದ ಲಂಚವನ್ನು ನೇರವಾಗಿ ತೆಗೆಯದ ಪರಿಣಾಮ ಜಿಎಎಸ್ಟಿ ಮೂಲಕ ಸರ್ಕಾರ ಲಂಚ ತೆಗೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಬಿಜೆಪಿ ಸರ್ಕಾರದಲ್ಲಿರುವ ಮಂತ್ರಿಗಳಿಗೆ ಲಂಚ, ಹಣ ಮಾಡೋದರ ಬಗ್ಗೇನೆ ಇದೆ ಆದರೆ ಜನರ ಬಗ್ಗೆ ಚಿಂತನೆಯೇ ಇಲ್ಲ. ಕಳೆದ ಮೂರು ವರ್ಷಗಳಲ್ಲಿ ಈ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಮಾಡೋದು, ಸಚಿವರು ಹಣ ಮಾಡೋದರಲ್ಲಿ ಮಾತ್ರ ಚಿಂತೆಯೇ ಹೊರತು ಜನರ ಬಗ್ಗೆ ಯಾವುದೇ ಚಿಂತೇನೆ ಇಲ್ಲ ಈ ಸರ್ಕಾರಕ್ಕೆ ಇಲ್ಲ. ಈ ಬಿಜೆಪಿ ಸರ್ಕಾರದ ಆಡಳಿತ ಯಾವುದೇ ಕಾರಣಕ್ಕೂ ಸರಿಗಿಲ್ಲ, ಅದು ನಿಮ್ಮ ಅನುಭವಕ್ಕೆ ಬಂದಿದೆ ಎಂದು ಅವರು ಹೇಳಿದರು.
























































