ಬೆಂಗಳೂರು: ಸೋಲಿಲ್ಲದ ಸರದಾರ ಎಂದೇ ಬಿಂಬಿತರಾಗಿರುವ ಕಾಂಗ್ರೆಸ್ ನಾಯಕ ಕೆ.ಜೆ.ಜಾರ್ಜ್ ಅವರನ್ನು ಸೋಲಿಸಲು ಬಿಜೆಪಿ ರಣವ್ಯೂಹ ರಚಿಸುತ್ತಿದೆ. ಸುಶಿಕ್ಷಿತ ಯುವ ಪಡೆಯನ್ನೇ ಹೊಂದಿರುವ ಥಾಮಸ್ ಚೆರಿಯನ್ ನೀಲಿಯಾರ ಅವರನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಚಿಂತನೆ ನಡೆಸುತ್ತಿದೆ. ಇದೀಗ ಈ ಬೆಳವಣಿಗೆ ಸರ್ವಜ್ಞನಗರೆ ಮತದಾರರ ಕುತೂಹಲ ಹೆಚ್ಚಿಸಿದೆ.
ಏನಿದು ಅಚ್ಚರಿಯ ಬೆಳವಣಿಗೆ?
ಕೆ.ಜೆ.ಜಾರ್ಜ್ ಅವರು ಬೆಂಗಳೂರು ಕಂಡ ಶ್ರೀಮಂತ ರಾಜಕಾರಣಿ. ಪ್ರತಿಷ್ಠಿತ ಐಟಿ ಪಾರ್ಕ್, ರಿಯಲ್ ಎಸ್ಟೇಟ್ ಉದ್ಯಮ ಕ್ಷೇತ್ರದಲ್ಲೂ ಪಳಗಿರುವ ದಿಗ್ಗಜ. ಆದರೆ ರಾಜಕಾರಣದ ವಿಚಾರದಲ್ಲಿ ಅವರು ಉದ್ಯಮ ಕ್ಷೇತ್ರದಷ್ಟು ಆಸಕ್ತಿ ತೋರಿಲ್ಲ ಎಂಬುದೇ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಜನರ ಬೇಸರ.
ಸರ್ವಜ್ಞ ನಗರವು ಐಟಿ ಕಂಪನಿಗಳ ಅಡ್ಡೆಗೆ ಹೊಂದಿಕೊಂಡಂತಿರುವ ಕ್ಷೇತ್ರವಾಗಿದ್ದರೂ ಹಲವಾರು ಪ್ರದೇಶಗಳು ಇನ್ನೂ ಸ್ಲಂ ಸ್ವರೂಪವನ್ನು ಕಳಚಿಲ್ಲವಂತೆ. ಇದಕ್ಕೆ, ಈ ವರೆಗೂ ಶಾಸಕರಾಗಿರುವ ಕೆ.ಜೆ.ಜಾರ್ಜ್ ಅವರ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂಬುದು ಸ್ಥಳೀಯರ ಆಮಾಧಾನ. ಆದರೂ ಕ್ರಿಶ್ಚಿಯನ್ ಮತದಾರರೇ ಬಹುಪಾಲು ಇರುವುದರಿಂದ ಸ್ವಜಾತಿಯ ಮತಗಳಿಂದ ಜಾರ್ಜ್ ಅವರು ಪುನರಾಯ್ಕೆಯಾಗುತ್ತಲೇ ಬಂದಿದ್ದಾರೆ. ಈ ಎಲ್ಲಾ ಸ್ಥಿತಿಗತಿ ಅರಿತಿರುವ ಬಿಜೆಪಿ ಈ ಬಾರಿ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರಕ್ಕೆ ಕ್ರಿಶ್ಚಿಯನ್ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ತಯಾರಿ ನಡೆಸಿದೆ.
ಯಾರಿವರು ಥಾಮಸ್ ಚೆರಿಯನ್?
ಬಹುತೇಕ ಪಕ್ಷಗಳ ಹಿರಿಯ ನಾಯಕರಿಗೆ ಮಾರ್ಗದರ್ಶಕರಾಗಿರುವ ಥಾಮಸ್ ಅವರು, ಐಟಿ-ಬಿಟಿ ಮಾತ್ರವಲ್ಲ ರಾಜ್ಯ ರಾಜಕಾರಣದ ಹಲವರಿಗೆ ಮಾರ್ಗದರ್ಶಕರು. ಅದರಲ್ಲೂ ಬಿಜೆಪಿ ಹಿರಿತಲೆಗಳ ಜೊತೆ ಬಾಲ್ಯದಿಂದಲೇ ಒಡನಾಟ ಹೊಂದಿರುವ ಕಾರ್ಯಕರ್ತ. ಬಿಎಸ್ವೈ, ಅಶೋಕ್, ಅಶ್ವತ್ಥನಾರಾಯಣ್ ಸಹಿತ ಹಲವು ನಾಯಕರ ಸಲಹಾ ತಂಡದಲ್ಲಿ ಕಾರ್ಯನಿರ್ವಹಿಸಿರುವವರು. ಕಾನೂನು ಪದವೀಧರರಾಗಿ, ಹಣಕಾಸು ತಜ್ಞರಾಗಿರುವ ಇವರು ಪ್ತಜ್ಞಾವಂತ ಮತದಾರರ ನಡುವೆ ಉತ್ತಮ ನಾಯಕರು ಎಂಬುದು ಬಿಜೆಪಿ ವರಿಷ್ಠರ ಪ್ರತಿಪಾದನೆ. ಹಾಗಾಗಿಯೇ ಈ ಬಾರಿ ಕಾಂಗ್ರೆಸ್ನ ಮಾಜಿ ಸಚಿವ ಕೆ.ಜೆ.ಜಾರ್ಜ್ ವಿರುದ್ದ ಥಾಮಸ್ ಚೆರಿಯನ್ ನೀಲಿಯಾರ್ ಅವರನ್ನು ಕಣಕ್ಕಿಳಿಸಲು ಕಮಲ ನಾಯಕರು ಸಿದ್ದತೆ ಕೈಗೊಂಡಿದ್ದಾರೆ.
ಜಾರ್ಜ್ ವಿರುದ್ದ ತೊಡೆತಟ್ಟಿದ ಥಾಮಸ್:
ಕೆ.ಜೆ.ಜಾರ್ಜ್ ಅವರ ಬಗ್ಗೆ ಸರ್ವಜ್ಞ ನಗರದ ಪ್ರಜ್ಞಾವಂತ ಮತದಾರರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಹೆಲ್ತ್ ಹಾಗೂ ಎಜುಕೇಷನ್ ವಿಚಾರದಲ್ಲಿ ತಮ್ಮ ಕ್ಷೇತ್ರ ಅಭಿವೃದ್ಧಿ ಕಂಡಿಲ್ಲ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲ, ಐಟಿ ಕಂಪನಿಗಳ ಅಡ್ಡೆಗೆ ಹೊಂದಿಕೊಂಡಿದ್ದರೂ ಈ ಕ್ಷೇತ್ರ ಸ್ಲಂ ಸ್ವರೂಪದಿಂದ ಪರಿವರ್ತನೆಯಾಗಿಸುವಲ್ಲಿ ಜಾರ್ಜ್ ವಿಫಲರಾಗಿದ್ದಾರೆ ಎಂಬುದು ಹಲವರ ಅಭಿಪ್ರಾಯ.
ಈ’ಕುರಿತಂತೆ ಬಿಜೆಪಿಯ ಟಿಕೆಟ್ ಆಕಾಂಕ್ಷಿ ಥಾಮಸ್ ಚೆರಿಯನ್ ಕೂಡಾ ತಮ್ಮದೇ ರೀತಿಯಲ್ಲಿ ಅಭಿಪ್ರಾಯ ಮುಂದಿಟ್ಟಿದ್ದಾರೆ. ‘ಜನರ ಮೊದಲ ಅಪೇಕ್ಷೆಯೇ ಶಿಕ್ಷಣ ಮತ್ತು ಆರೋಗ್ಯ. ಈ ವಿಚಾರವನ್ನು ಮರೆತಿರುವ ಜಾರ್ಜ್ ಅವರಿಗೆ ಈ ಬಾರಿ ಮತ್ತೆ ಮತಕೇಳಲು ನೈತಿಕತೆ ಇಲ್ಲ’ ಎಂದು ಥಾಮಸ್ ಹೇಳಿದ್ದಾರೆ.
ಜಾರ್ಜ್ ಅವರು ಈ ಕ್ಷೇತ್ರಕ್ಕೆ ಸ್ಥಳೀಯರಂತೆ ಇಲ್ಲ. ಅವರು ಕೋರಮಂಗಲ ಕಡೆ ಗಮನ ಕೇಂದ್ರೀಕರಿಸಿದ್ದಾರೆ. ಸಾವಿರಾರು ಕೋಟಿಯ ಉದ್ಯಮದತ್ತ ಅವರ ಆಸಕ್ತಿ ಹೆಚ್ಚಿರುವುದರಿಂದ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅವರಿಗೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಅರಿತಿರುವ ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಹಾಗಾಗಿ ಕಾದು ನೋಡೋಣ ಎನ್ನುತ್ತಿದ್ದಾರೆ ಥಾಮಸ್ ಚೆರಿಯನ್ ನೀಲಿಯಾರ.






















































ಯಾರಿವರು ಥಾಮಸ್ ಚೆರಿಯನ್?