ಮಂಗಳೂರು: ದೇವರನ್ನು ಒಲಿಸಲು ಆಸ್ತಿಕರು ನಾನಾ ರೀತಿಯ ಕೈಂಕರ್ಯ ನೆರವೇರಿಸುತ್ತಾರೆ. ಭಜನೆ, ಪೂಜೆ, ಹೋಮ-ಹವನಗಳು ಸಾಮಾನ್ಯ. ಅದರಲ್ಲೂ ಸಂಗೀತಾಸಕ್ತರನ್ನು ಒಗ್ಗೂಡಿಸಿ ದೇವರ ಗುಣಗಾನ ಮಾಡುವ ಹಾಡಿನ ಮೋಡಿಗೆ ತಲೆದೂಗದವರೇ ಇಲ್ಲ. ಇದೀಗ ಈ ರೀತಿಯ ಭಜನೆಗೂ ಹೊಸತನದ ಸ್ಪರ್ಶ ನೀಡಲಾಗುತ್ತಿದೆ.
ದಕ್ಷಿಣ ಕನ್ನಡದಲ್ಲಿ ಭಜನೆಯನ್ನು ನೃತ್ಯದ ರೂಪದಲ್ಲಿ ನೆರವೇರಿಸುವ ಸನ್ನಿವೇಶಗಳು ಕಂಡುಬರುತ್ತಿವೆ. ಬಂಟ್ವಾಳ ಸಮೀಪದ ಕಾರಿಂಜೆಯಲ್ಲಿ ಶಿವರಾತ್ರಿ ಅಂಗವಾಗಿ ನಡೆದ ಮಹೋತ್ಸವ ಸಂದರ್ಭದಲ್ಲಿ ಬಂಟ್ವಾಳದ ಆಸ್ತಿಕರ ಸಮೂಹ ನಡೆಸಿದ ಮೆರವಣಿಗೆ ಗಮನಸೆಳೆಯಿತು. ಈ ಸಂಕೀರ್ತನಾ ಮೆರವಣಿಗೆಗೆ ನೃತ್ಯರೂಪದ ಭಜನೆಯು ಆಕರ್ಷಣೆ ತುಂಬಿತು.
ಅನನ್ಯ ಕೈಂಕರ್ಯ ನೃತ್ಯದ ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು ಬಂಟ್ವಾಳದ ಯುವಜನರ ಈ ಸಂಕೀರ್ತನೆಗೆ ಸಕತ್ ಮೆಚ್ಚುಗೆ ವ್ಯಕ್ತವಾಗಿದೆ.
ಶ್ರೀ ಕಾರಿಂಜ ಕ್ಷೇತ್ರಕ್ಕೆ ಭವ್ಯ ಸಂಕೀರ್ತನಾ ಯಾತ್ರೆ..
ಪರಶಿವನ ಮಡಿಲಿನಲ್ಲಿ "ಓಂ ನಮಃ ಶಿವಾಯ" ಕೋಟಿ ನಾಮ ಜಪ @nalinkateel @URajeshNaik @VHPDigital @OfTulunad @mahathme @Shreya_Sanatani @amshilparaghu @iamgowda_sushma pic.twitter.com/EhxHngnxCg— jayaa (@unsocial2023) February 19, 2023
ಇದನ್ನೂ ಓದಿ.. KSRTC ವಿಶಿಷ್ಠ ಪ್ರಯೋಗ.. ಪ್ರಯಾಣಿಕರಿಗಾಗಿ ‘ಅಂಬಾರಿ ಉತ್ಸವ’
https://twitter.com/unsocial2023/status/1627329368975609861?t=LEj13rfU18F7hBqsUnJLGA&s=19