ಬೆಂಗಳೂರು: ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಇದೀಗ ರಾಜ್ಯ ಸರ್ಕಾರದ ವಿರುದ್ದ ಸಿಡಿದೆದ್ದಿದ್ದಾರೆ. ಕೊರೋನಾ ಮತ್ತೊಂದು ಅಲೆ ಅಪ್ಪಳಿಸುವ ಆತಂಕ ಇದ್ದರೂ ಈ ವರೆಗೂ ಕೊರೋನಾ ಸೇನಾನಿಗಳಾಗಿ ಸಮರ್ಥ ಸೇವೆಗಳನ್ನು ನೀಡಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ಸರ್ಕಾರ ಕಡೆಗಣಿಸಿದೆ ಎಂಬುದು ಮುಖಂಡರ ಆರೋಪ. ಈ ಹಿನ್ನೆಲೆಯಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಯುತ್ತಿರುವ ಬೆಳಗಾವಿಗೆ ಲಗ್ಗೆ ಹಾಕಲು ಆಶಾ ಸಮೂಹ ನಿರ್ಧರಿಸಿದೆ.
ಡಿ.27-28ರಂದು ರಾಜ್ಯವ್ಯಾಪಿ ಹೋರಾಟ ನಡೆಸುವುದಾಗಿ ಘೋಷಿಸಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ‘ಬೆಳಗಾವಿ ಬಲೋ’ ಹಮ್ಮಿಕೊಂಡಿದೆ.
ಡಿಸೆಂಬರ್ ತಿಂಗಳಿನಿಂದ ಕೇಂದ್ರ ಪ್ರೋತ್ಸಾಹ ಧನದ ಪಾವತಿಯನ್ನು ಆರ್ಸಿಹೆಚ್ ಪೋರ್ಟಲ್ಗೆ ಲಿಂಕ್
ಮಾಡುವುದನ್ನು ನಿಲ್ಲಿಸಬೇಕು. ಆರ್ಸಿಹೆಚ್ ಪೋರ್ಟಲ್ ವಿಚಾರದಿಂದ ಕಳೆದೆರಡು ವರ್ಷಗಳಲ್ಲಿ ಉಂಟಾಗಿರುವ ನಷ್ಟವನ್ನು ತುಂಬಿಕೊಡಬೇಕು. ಮಾಸಿಕ 12,000 ರೂಪಾಯಿ ಗೌರವಧನ ಒಂದೇ ರೀತಿ ಪಾವತಿಯಾಗಬೇಕು ಎಂಬ ಒತ್ತಾಯ ಸಹಿತ ಬಹುಕಾಲದ ಏಡಿಕೆಗಳನ್ನು ಮುಂದಿಟ್ಟು ಈ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಮುಖರು ತಿಸಿದ್ದಾರೆ.



















































